ಹಾಡೊನಹಳ್ಳಿಯಲ್ಲಿ ಶ್ರೀ ಶಿರಡಿ ಸಾಯಿಬಾಬ ಮಂದಿರ ಉದ್ಘಾಟನೆ
ದೊಡ್ಡಬಳ್ಳಾಪುರ ತಾಲ್ಲೂಕು ತೂಬಗೆರೆ ಹೋಬಳಿ, ಘಾಟಿ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನದರಸ್ತೆಯಲ್ಲಿರುವ ಹಾಡೋನಹಳ್ಳಿ ಸಮೀಪದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಶಿರಡಿ ಸಾಯಿಬಾಬ ದೇವಸ್ಥಾನದ ಉದ್ಘಾಟನೆಯನ್ನು ಕಾರ್ತೀಕ ಶುದ್ಧ ದಶಮಿ ಭಾನುವಾರ ದಿನಾಂಕ 18-11-2018 ರಂದು ದಿವ್ಯ ಮಂಗಳ ವಿಗ್ರಹಗಳ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ನೆರವೇರಿಸಲಾಯಿತು, ದೊಡ್ಡಬಳ್ಳಾಪುರದ ದೇವಲೋಕಂ ಶೋಬನ್ ಬಾಬು ಮತ್ತು ಕುಟುಂಬದವರು ಇದೇ ವರ್ಷ 2018 ರ ವಿಜಯದಶಮಿಗೆ ಸಾಯಿಬಾಬಾರವರು ಮಹಾ ಸಮಾಧಿಯಾಗಿ ನೂರು ವಸಂತಗಳು ಪೂರೈಸಿದ ಪ್ರಯುಕ್ತ ನಿರ್ಮಿಸಲ್ಪಟ್ಟಿರುವ ಸಾಯಿಬಾಬ ಮಂದಿರದ ಉದ್ಘಾಟನೆಯನ್ನು ಆಗಮಿಕರಾದಂತಹ ಶ್ರೀ ಗುರುಕಿರಣ್ ದೇಶಪಾಂಡೆ ಮತ್ತು ತಂಡದವರು ಇಂದು ವಿದ್ಯುಕ್ತವಾಗಿ ನೆರವೇರಿಸಿದರು.
ಇಂದು ಬೆಳಿಗ್ಗೆ 6 ಘಂಟೆಗೆ ಗಣಪತಿ ಪೂಜೆ, ಗೋಪೂಜೆ, ಯಮುನಾ ಪೂಜೆ, ಗಂಗಾ ಪೂಜೆ, ಗುರುವಂದನೆ, ಸಭಾವಂದನೆ, ದೇವನಾಂದಿ, ಮೃತ್ಸಂಗ್ರಹಣ, ಮಹಾಗಣಪತಿ ಹೋಮ, ದತ್ತಾತ್ರೇಯ ಹೋಮ, ತತ್ವನ್ಯಾಸಹಾನಿ ಸಹಿತ ಮಹಾಸುದರ್ಶನ ಹೋಮ, ವಿಶೇಷ ಸಾಯಿರಾಮತಾರಕ ಹೋಮ, ಪೂರ್ಣಾಹುತಿ ನಂತರ ನೇತ್ರೋನ್ಮಿಲನ, ಪ್ರಾಣ ಪ್ರತಿಷ್ಠಾಪನಾ, ದೇನು ದರ್ಶನ, ಕದಲೀ ಕಂಭ ಛೇದನ, ಕೂಷ್ಮಾಂಡ ಬಲಿ, ಮಹಾ ಕುಂಭಾಭಿಷೇಕದೊಂದಿಗೆ ಮಧ್ಯಾಹ್ನ 12-30 ಕ್ಕೆ ಸರಿಯಾಗಿ ಮಹಾಮಂಗಳಾರತಿ ನೆರವೇರಿಸಲಾಯಿತು.
ಮಧ್ಯಾಹ್ನ 1-00 ಘಂಟೆಗೆ ಬೆಂಗಳೂರಿನ ವಿಕಾಸ ವಿಕಲಚೇತನ ಅಂದರ ವಾದ್ಯಗೋಷ್ಠಿ, ಮಧ್ಯಾಹ್ನ 3-00 ಘಂಟೆಗೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಶ್ರೀ ಆರ್ಯ ವೈಶ್ಯ ಮಹಿಳಾ ಮಂಡಳಿ, ಶ್ರೀ ಗಾಯತ್ರಿದೇವಿ ಮಹಿಳಾ ಮಂಡಳಿ, ಶ್ರೀ ಚೌಡೇಶ್ವರಿ ಮಹಿಳಾ ಸಂಘ ಮತ್ತು ಶ್ರೀ ಗಾಯತ್ರಿ ಬ್ರಾಹ್ಮಣ ಮಂಡಳಿಯವರಿಂದ. ಸಂಜೆ 4-30 ಘಂಟೆಗೆ ಗಾನ ಸುಧಾ ಲಲಿತಕಲಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, 5-30 ಘಂಟೆಗೆ ಪ್ರವಚನ ಮತ್ತು ಹಾಡುಗಾರಿಕೆ ಶ್ರೀ ಆನಂದಭಾರತಿ ಸ್ವಾಮೀಜಿಯವರಿಂದ, 6-30 ಘಂಟೆಗೆ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :- ಶೋಬನ್ ಬಾಬು 9242892995
Comments