ರೆಡ್ಡಿಯ ಪುಣ್ಯ ಕೋಟಿ ಕಥೆಗೆ ತಿರುಗೇಟು ಕೊಟ್ಟ ಜೆಡಿಎಸ್ ಮುಖಂಡರು
ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಿ ಸಿ ಬಿ ಪೊಲೀಸರು ಬಂಧಿಸಿದರು, ಬುಧವಾರ ಸಂಜೆ ಜಾಮೀನಿನ ಮೇಲೆ ಬಿಡುಗಡೆಯಾದ ಜನಾರ್ದನ ರೆಡ್ಡಿ ಸಿಎಂ ಕುಮಾರಸ್ವಾಮಿ ವಿರುದ್ಧ ಪುಣ್ಯ ಕೋಟಿ ಕಥೆ ಹೇಳುವ ಮೂಲಕ ಟೀಕಿಸಿದರು.
ಜೆಡಿಎಸ್ ಕಚೇರಿಯಲ್ಲಿ ಶ್ರೀಕಂಠೇಗೌಡ ಮತ್ತು ರಮೇಶ್ ಬಾಬು ರವರು ಸುದ್ದಿಗೋಷ್ಠಿಯಲ್ಲಿ ಜನಾರ್ದನ ರೆಡ್ಡಿಗೆ ಭರ್ಜರಿ ತಿರುಗೇಟನ್ನ ಕೊಟ್ಟಿದಾರೆ. ನಾವು ಚಿಕ್ಕವರಿದಾಗ ನಾಲ್ಕು ಕಾಲಿನ ಹಸುವಿನ ಕಥೆ ಕೇಳಿದ್ದೇವೆ, 'ಈಗ ಎರಡು ಕಾಲಿನ ಗಣಿ ಲೂಟಿ ಮಾಡುವ ಪುಣ್ಯ ಕೋಟಿ ಕಥೆ ಕೇಳ್ತಿದ್ದೇವೆ, ರಾಜ್ಯದ ಜನ ದಡ್ಡರಲ್ಲ, ರೆಡ್ಡಿ ಹಗರಣದ ಕಥೆ ಎಲ್ಲರಿಗು ತಿಳಿದಿದ್ದು ಎರಡು ಸಾವಿರ ಕೋಟಿ ಹಣ ಜನಸಾಮಾನ್ಯರಿಗೆ ಮೋಸ ಆಗಿದೆ. ಜನಾರ್ದನ ರೆಡ್ಡಿ ರಾಜ್ಯ ರಾಜಕಾರಣಕ್ಕೆ ಒಂದು ಕಪ್ಪು ಚುಕ್ಕೆ ನಿಜವಾದ ಪುಣ್ಯ ಕೋಟಿ ಅಂದರೆ ಅದು ಎಚ್ ಡಿ ಕುಮಾರಸ್ವಾಮಿ, ಎರಡು ಕಾಲಿನ ಪುಣ್ಯಕೋಟಿ ಕೂಡಲೇ ತಮ್ಮ ಉದ್ಘಾಟತನ ಬಿಡಲಿ ಮತ್ತು ಬಿಜೆಪಿಯವರು ರೆಡ್ಡಿಯ ಬೆಂಬಲಕ್ಕೆ ನಿಲ್ಲೋದನ್ನ ಬಿಡಲಿ ಎಂದು ಟೀಕಿಸಿದ್ದಾರೆ.
Comments