ರೈತರ ಆತ್ಮಹತ್ಯೆ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಎಚ್ ಡಿ ಕುಮಾರಸ್ವಾಮಿ
ಇಂದು ಬೆಂಗಳೂರಿನಲ್ಲಿ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ ಯವರು ರೈತರ ಆತ್ಮಹತ್ಯೆ ಬಗ್ಗೆ ಮಾತನಾಡಿ ಕೃಷಿ ಸಾಲ ಮನ್ನಾ ಮಾಡುವ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಹೇಳಿದರು.
ರೈತರ ಕೃಷಿ ಸಾಲ ಮನ್ನಾ ಮಾಡ್ತೀವಿ ಅದರ ಬಗ್ಗೆ ಯಾವುದೇ ಸಂಶಯ ಬೇಡ ಆದ್ರೆ ಬೇರೆ ಸಾಲ ಮನ್ನಾ ಮನ್ನಾ ಮಾಡಲು ಸಾಧ್ಯವಿಲ್ಲ. ಯರ್ರಾರೋ ಯಾವುದೊ ವಿಷಯಕ್ಕೆ ಆತ್ಮ ಹತ್ಯೆ ಮಾಡಿಕೊಂಡರೆ ಅದನ್ನು ಬೆಳೆ ಸಾಲಕ್ಕೆ ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಲಾಗುತ್ತಿದೆ ಎಂದು ಹೇಳಿದರು. ನೆನ್ನೆ ನಡೆದ ಒಂದು ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಮಾಧ್ಯಮದವರ ತೋರಿಸಿದ ವಿಷಯದ ಬಗ್ಗೆ ಮಾಹಿತಿ ತೆಗೆದುಕೊಂಡು ನೋಡಿದರೆ, ಅದು ಬೆಳೆ ಸಾಲದ ನೋಟಿಸ್ ಆಗಿರಲಿಲ್ಲ, ಅದು ಅವರ ಮನೆ ಸಾಲದ ನೋಟಿಸ್ ಆಗಿತ್ತು ಎಂದು ತಿಳಿಸಿದರು.
Comments