೬೩ ನೇ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಶನಿವಾರದಂದು
ಮಹಿಳಾ ಸಮಾಜ ಕಸ್ತೂರಿಬಾ ಶಿಶು ವಿಹಾರ ಕೇಂದ್ರ ವತಿಯಿಂದ ದಿನಾಂಕ ೧೭ ನೇ ಶನಿವಾರದಂದು ಬೆಳಿಗ್ಗೆ ೧೧ ಘಂಟೆಗೆ ಹಳೇ ಬಸ್ ನಿಲ್ದಾಣದಲ್ಲಿರುವ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದಾರೆ, ಕಾರ್ಯಕ್ರಮ ಉದ್ಘಾಟನೆಯನ್ನು ಜಿ ಕನ್ನಡದ ಸರಿಗಮಪ ಲಿಟ್ಲ್ ಚಾಂಪ್ ೧೪ ನೇ ಆವೃತ್ತಿಯ ರನ್ನರ್ ಅಪ್ ವಿಜೇತೆ ಕುಮಾರಿ ಸಿ.ಕೀರ್ತನ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಬಾಲನಟ ಚಿರಂಜೀವಿ. ಕೆ. ಮನೋಹರ, [ಪೃಥ್ವಿ ಕೊಣನೂರು ನಿರ್ದೇಶನದ 'ರೈಲ್ವೇ ಚಿಲ್ಡ್ರನ್' ಚಿತ್ರದ ಅಭಿನಯಕ್ಕಾಗಿ 'ಅತ್ಯುತ್ತಮ ಬಾಲನಟ' ಪ್ರಶಸ್ತಿಯನ್ನ ದೊಡ್ಡಬಳ್ಳಾಪುರದ ಹುಡುಗ ಮನೋಹರ.ಕೆ ಮೂಲತಃ ದೊಡ್ಡಬಳ್ಳಾಪುರದವರು. ಹೈ ಸ್ಕೂಲ್ ವ್ಯಾಸಂಗ ಮಾಡುತ್ತಿರುವ ಮನೋಹರ.ಕೆ ಓದಿನಲ್ಲಿ ನಂಬರ್ ಓನ್... ಉತ್ತಮ ಕ್ರೀಡಾಪಟು ಕೂಡ ಹೌದು] ಅಂತರಾಷ್ಟ್ರೀಯ ಚೆಸ್ ಆಟಗಾರ್ತಿ ಕುಮಾರಿ. ಎಂ.ಕೆ. ನವ್ಯಶ್ರೀ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಪನ್ಮೂಲ ವ್ಯಕ್ತಿ, ಟೈಮ್ಸ್ ಆಫ್ ಇಂಡಿಯ,ಆಪ್ತ ಸಮಾಲೋಚಕಿ ಹಾಗೂ ಕೌಶಲ್ಯ ತರಭೇತುದಾರರಾದ ಶ್ರೀಮತಿ.ಎಂ ಜಾನಕಿ ಆಗಮಿಸಲಿದಾರೆ, ಅಧ್ಯಕ್ಷತೆಯನ್ನು ಶ್ರೀಮತಿ ಕೆ.ಎಸ್.ಪ್ರಭ, ಅಧ್ಯಕ್ಷರು. ಮಹಿಳಾ ಸಮಾಜ, ದೊಡ್ಡಬಳ್ಳಾಪುರ, ವಹಿಸಿಕೊಳ್ಳಲಿದ್ದಾರೆ.
ಉಪಾಧ್ಯಕ್ಷೆ ಶ್ರೀಮತಿ ಕೆ.ಜೆ.ಕವಿತ, ಕಾರ್ಯದರ್ಶಿ ಶ್ರೀಮತಿ ಎಲ್.ಸಿ.ದೇವಕಿ, ಖಜಾಂಚಿ ಶ್ರೀಮತಿ ಜಿ.ವಿ.ಯಶೋಧ ನಿರ್ದೇಶಕರಾದ ಶ್ರೀಮತಿ ಎಂ.ಕೆ.ವತ್ಸಲ, ಶ್ರೀಮತಿ ವಿ.ನಿರ್ಮಲ, ಶ್ರೀಮತಿ ಎಸ್.ಗೌರಮ್ಮ, ಶ್ರೀಮತಿ ಟಿ.ಪಿ.ವರಲಕ್ಷ್ಮಿ, ಶ್ರೀಮತಿ ಬಿ.ಎ.ಗಿರಿಜ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ. ಮಹಿಳಾ ಸಮಾಜದ ಎಲ್ಲಾ ಸದಸ್ಯರೂ ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾರ್ಯದರ್ಶಿ ದೇವಕಿ ಕೋರಿದ್ದಾರೆ.
Comments