ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸುಗಳನ್ನು ರಕ್ಷಿಸಿದ ಬಜರಂಗದಳ ಕಾರ್ಯಕರ್ತರು






ಬಜರಂಗದಳ ಕಾರ್ಯಕರ್ತರಾದ ಬೇಗಲಿ ಮಧು, ನರೇಶ, ಗಿರೀಶ್, ಮನು, ಭಾಸ್ಕರ್, ಪುರುಶೋತ್ತಮ್,ಕಾರ್ತೀಕ್ ಮತ್ತು ರಾಮರೆಡ್ಡಿ ನೆನ್ನೆ ಅಕ್ರಮವಾಗಿ ಕಸಾಯಿಖಾನೆಗೆ ಹಸುಗಳನ್ನು ಸಾಗಿಸುತ್ತಿದ್ದ ವಾಹನಗಳನ್ನು ಪೋಲೀಸರ ವಶಕ್ಕೆ ಒಪ್ಪಿಸಿದ್ದಾರೆ, ತುಮಕೂರಿನಿಂದ ಬೆಂಗಳೂರಿನ ಕಡೆಗೆ ಸೋಮವಾರ ಮಧ್ಯಾನ್ಹ ಹಸುಗಳನ್ನು ಸಾಗಿಸುತ್ತಿದ್ದ ಟಾಟಾ ಏಸ್ ವಾಹನಗಳನ್ನು ಕೊಡಿಗೆಹಳ್ಳಿ ಬಳಿ ತಡೆದಾಗ ಒಂದು ವಾಹನದ ಚಾಲಕ ವಾಹನ ಬಿಟ್ಟು ಪರಾರಿಯಾದ, ಅನುಮಾನಗೊಂಡು ವಾಹನ ಪರಿಸೀಲಿಸಿದಾಗ ೧೨ ದೇಶಿತಳಿಯ ಹಸುಗಳನ್ನು ಬೆಂಗಳೂರಿನ ಕಸಾಯಿಖಾನೆಗೆ ಸಾಗಿಸುತ್ತಿದ್ದ ವಿಷಯ ಬಯಲಾಗಿದೆ, ಗ್ರಾಮಾಂತರ ಠಾಣೆಗೆ ಕರೆ ಮಾಡಿದ ಕಾರ್ಯಕರ್ತರು ಎರಡು ವಾಹನ, ೧೨ ಹಸು ಹಾಗೂ ಇಬ್ಬರು ವ್ಯಕ್ತಿಗಳನ್ನು ಪೋಲೀಸರ ವಶಕ್ಕೆ ನೀಡಿದರು. ಹಸುಗಳನ್ನು ಘಾಟಿ ಬಳಿಯ ಗೋಶಾಲೆಗೆ ಕಳುಹಿಸಲಾಗಿದೆ ಎಂದು ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ರಾಜು ತಿಳಿಸಿದ್ದಾರೆ.
Comments