ಭಾರತೀಯ ಜನತಾ ಪಕ್ಷ ಬೆಂ.ಗ್ರಾ.ಜಿಲ್ಲಾ ಕಛೇರಿಯಲ್ಲಿ ಅಗಲಿದ ನಾಯಕ ಅನಂತಕುಮಾರ್ ರವರಿಗೆ ಶ್ರದ್ಧಾಂಜಲಿ ಸಲ್ಲಿಕೆ







ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅನಂತಕುಮಾರ್ ಬೆಳಗಿನ ಜಾವ 2 ಘಂಟೆಗೆ ಬೆಂಗಳೂರಿನ ಶಂಕರ್ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ, ಅವರಿಗೆ ಇಂದು ಮಧ್ಯಾನ್ಹ ಹನ್ನೆರಡು ಘಂಟೆಗೆ ದೊಡ್ಡಬಳ್ಳಾಪುರ ಬಿಜೆಪಿ ಪಕ್ಷದ ಕಛೇರಿಯಲ್ಲಿ ಸಂತಾಪಸೂಚಕ ಸಭೆ ಏರ್ಪಡಿಸಲಾಗಿತ್ತು, ನಗರದ ಹಿರಿಯ ಆರ್.ಎಸ್.ಎಸ್. ಕಾರ್ಯಕರ್ತರೂ ಬಾಜಪ ನಾಯಕ ನಾರಾಯಣಶರ್ಮ ಮಾತನಾಡುತ್ತಾ ಅಗಲಿದ ಅನಂತಕುಮಾರ್ ಜೊತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡು ಅವರ ಅಗಲಿಕೆಯಿಂದ ತುಂಬಾ ಆಘಾತ ಆಗಿದೆ, ಸದ್ಗತಿ ಸಿಗಲಿ ಎಂಬುದು ಮಾಮೂಲಿ ಸಂಗತಿ, ಅವರ ಸಾಧನೆ, ಸಂಘಟನಾ ಪರಿಶ್ರಮ,ಅವರಲ್ಲಿದ್ದ ಸಂಘಟನಾ ಶಕ್ತಿಯನ್ನು ನೆನಪಿಸಿಕೊಂಡರು. ಸಮಾಜಮುಖಿ ಕೆಲಸ ಮಾಡುವ ವ್ಯಕ್ತಿಯಾಗಿದ್ದ ಅನಂತಕುಮಾರ್ ರಾಜಕೀಯ ಪ್ರವೇಶ ಮಾಡಿದ ಕಾಲದಲ್ಲಿ ಅಸ್ಪ್ರುಶ್ಯರಾಗಿದ್ದವರು, ಮದ್ಯಮ ವರ್ಗದಲ್ಲಿ ಹುಟ್ಟಿದಂತವ ಎಷ್ಟು ಎತ್ತರಕ್ಕೆ ಬೆಳೆಯಬಲ್ಲ ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುತ್ತಾರೆ, ಯಾವುದೇ ಹಮ್ಮು ಬಿಮ್ಮು ಇಲ್ಲದಂತವರು ಎಂದು ಹೇಳಿದರು.
ಯಾರು ಹಿಡಿದ ಕೆಲಸ ಸಾಧಿಸುವರೋ ಅಂತವರಿಗೆ ಮಣೆ ಹಾಕುವಂತ ವ್ಯಕ್ತಿ ಮೋದಿ, ಈ ಕಾರಣಕ್ಕಾಗಿಯೇ ಅನಂತಕುಮಾರ್ ಮೋದಿ ಸಂಪುಟದಲ್ಲಿ ಮತ್ರಿಯಾಗಿದ್ದು, ಕರ್ನಾಟಕದ ಯಾವುದೇ ಊರಿನಿಂದ ಬಂದಂತ ನಿಯೋಗಗಳಿಗೆ ದೆಹಲಿಯಲ್ಲಿ ಸೌಲಭ್ಯ ಕಲ್ಪಿಸುವ ವ್ಯಕ್ತಿ, ರಾಜ್ಯದ ಹಿತ, ಜನಹಿತ ಮುಖ್ಯ ಎಂದವರು, ಅಟಲ್ ಮತ್ತು ಮೋದಿ ಸರ್ಕಾರದಲ್ಲಿ ಕೆಲಸ ಮಾಡಿದ, ಸಂಸದೀಯ ಜವಾಬ್ದಾರಿಯನ್ನು ನಿಬಾಯಿಸಿದವರು, ಯಾರ ನಿರೀಕ್ಷೆಗೂ ಸಿಗದೆ ದುರ್ದೈವವಶಾತ್ ಕೇವಲ ನಾಲ್ಕು ತಿಂಗಳಲ್ಲಿ ಹೊರಟೇ ಬಿಟ್ಟರು ಎಂದು ಜೋ.ನಾ. ಮಲ್ಲಿಕಾರ್ಜುನ್ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ನಗರ ಅಧ್ಯಕ್ಷ ರಂಗರಾಜು ಮಾತನಾಡಿ ಅನಂತಕುಮಾರ್ ಜೊತೆಗಿನ ತಮ್ಮ ಅನುಭವಗಳನ್ನು ಮೆಲುಕುಹಾಕಿದರು. ಹಿರಿಯ ಹಿರಿಯ ಆರ್.ಎಸ್.ಎಸ್. ಕಾರ್ಯಕರ್ತ ಕೆ.ಹೆಚ್.ವೆಂಕಟಾಚಲಯ್ಯ, ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ನಗರ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಗೋಪಿ, ರಾಮಕೃಷ್ಣ, ಮಂಜುನಾಥ್, ನಗರಸಭಾ ಸದಸ್ಯ ಕೆ.ಬಿ.ಮುದ್ದಪ್ಪ, ಬೆಂ.ಗ್ರಾ.ಜಿಲ್ಲಾ ಯುವ ಮೋರ್ಚ ಅಧ್ಯಕ್ಷ ಶಿವಶಂಕರ್, ಉಪಾಧ್ಯಕ್ಷ ಶಿವು, ಬೆಂ.ಗ್ರಾ.ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ವತ್ಸಲ, ಕಾರ್ಯದರ್ಶಿ ದಾಕ್ಷಾಯಿಣಿ, ಖಜಾಂಚಿ ಕಮಲ, ನಗರ ಅಧ್ಯಕ್ಷೆ ಗಿರಿಜ, ಉಮಾಮಹೇಶ್ವರಿ ಮತ್ತು ಬಾಜಪ ಕಾರ್ಯಕರ್ತರು ಹಾಜರಿದ್ದರು.
Comments