ದೇವಾಲಯಗಳ ಹುಂಡಿಗೆ ಹಣ ಹಾಕುವ ಮುನ್ನ ಒಮ್ಮೆ ಯೋಚಿಸಿ....




ಇಂತಹ ಒಂದು ಕಠಿಣ ನಿರ್ಧಾರ ಹಿಂದೂಗಳು ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಯಾಕೆಂದರೆ ನಾವು ಭಕ್ತಿಯಿಂದ ಅರ್ಪಿಸಿದ ಹರಕೆಯ ಹಣ ಅನ್ಯ ಧರ್ಮೀಯರ ಅಭಿವೃದ್ಧಿ ಕಾರ್ಯಗಳಿಗೆ ಉಪಯೋಗವಾಗುತ್ತದೆ ಎಂದರೆ ನಾವೇಕೆ ಹರಕೆ ನೀಡಬೇಕು? ಹಿಂದೂಗಳ ಮೇಲೆ ದಬ್ಬಾಳಿಕೆ, ಹಿಂದೂ ದೇವಾಲಯಗಳ ಮೇಲೆ ದಬ್ಬಾಳಿಕೆ ಹೀಗೆ ಸರಕಾರ ಪ್ರತಿಯೊಂದು ಹಂತದಲ್ಲೂ ಹಿಂದೂಗಳನ್ನೇ ತನ್ನ ಕಾಲಡಿಗೆ ಹಾಕಿ ತುಳಿಯುತ್ತದೆ ಎಂದರೆ ನಾವೇಕೆ ಈ ನಿರ್ಧಾರ ತೆಗೆದುಕೊಳ್ಳಬಾರದು.? ಇನ್ನು ಮುಂದೆ ಯಾವುದೇ ದೇವಾಲಯಗಳಿಗೆ ಹೋದಾಗಲು ಆ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿದೆಯೇ ಎಂದು ಸರಿಯಾಗಿ ಗಮನಿಸಬೇಕು, ಒಂದು ವೇಳೆ ಮುಜರಾಯಿ ಇಲಾಖೆಗೆ ಸೇರಿದೆ ಎಂದಾದರೆ ದೇವರಿಗೆ ಭಕ್ತಿಯಿಂದ ಕೈ ಮುಗಿಯೋಣ, ತಲೆಬಾಗಿ ನಮಸ್ಕರಿಸೋಣ, ನಮ್ಮ ಬೇಡಿಕೆಗಳನ್ನು ಪ್ರಾರ್ಥಿಸೋಣ.
ಭಕ್ತಿಯಿಂದ ಹೊತ್ತ ಹರಕೆ ದೇವರಿಗೆ ಸಲ್ಲಿಕೆಯಾಗುತ್ತಿಲ್ಲ, ಬದಲಾಗಿ ನಾವು ಪೂಜೆಗೆ ಪಾವತಿಸಿದ ಹಣ ಇಂದು ಹಿಂದುಯೇತರರ ಖಜಾನೆ ಸೇರುತ್ತದೆ ಎಂದರೆ ನಮ್ಮ ನಾಶಕ್ಕೆ ನಾವೇ ಕಾರಣರಾಗುತ್ತಿದ್ದೇವೆ ಎಂದೇ ಅರ್ಥ. ಹುಂಡಿಗೆ ಹಾಕುವ ಹಣವನ್ನು ಸಮಾಜದಲ್ಲಿನ ಆಶಕ್ತರು, ಬಡ ಜನರಿಗೆ ಅಥವ ಗೋ ಶಾಲೆಯ ಗೋವುಗಳಿಗೆ ಗೋಗ್ರಾಸ ಕೊಡಲು ನಿಮ್ಮ ಕೈಲಾದ ಸಹಾಯ ಮಾಡುವ ಮೂಲಕ ತೋರಿಸಿ.
ಕೇರಳದಲ್ಲಿ ಶಬರಿಮಲೆ ವಿಚಾರವಾಗಿ ಹಿಂದೂಗಳ ವಿರುದ್ಧ ನಿಂತ ಕೇರಳ ಕಮ್ಯುನಿಸ್ಟ್ ಸರ್ಕಾರಕ್ಕೆ ಸೆಡ್ಡು ಹೊಡೆದ ಅಯ್ಯಪ್ಪ ಭಕ್ತರ ನಿರ್ಧಾರದಿಂದಾಗಿ ಕೋಟಿ ಕೋಟಿ ಹರಕೆ ರೂಪದಲ್ಲಿ ತನ್ನ ಖಜಾನೆ ತುಂಬಿಸಿಕೊಳ್ಳುತ್ತಿದ್ದ ಕೇರಳ ಸರ್ಕಾರಕ್ಕೆ ಈ ಬಾರಿ ಕೋಟ್ಯಂತರ ರೂಪಾಯಿ ನಷ್ಟ ಆಗಿದೆ. ಅಂದ ಮೇಲೆ ಈ ನಮ್ಮ ಒಂದು ನಿರ್ಧಾರ ಇಡೀ ಹಿಂದೂ ವಿರೋಧಿ ಸರ್ಕಾರವನ್ನೇ ಅಲುಗಾಡಿಸಿದಂತೆ. ಹಾಗಾದರೆ ನಾವೇಕೆ ಈ ನಿರ್ಧಾರ ತೆಗೆದುಕೊಳ್ಳಬಾರದು.? ಬನ್ನಿ ಹಿಂದೂ ಮಿತ್ರರೆ, ಇಂದೇ ಬದಲಾಗೋಣ, ಹಿಂದೂ ವಿರೋಧಿಗಳ ಹುಟ್ಟಡಗಿಸೋಣ. ನಿಮಗೆ ಇಷ್ಟ ಬಂದ ದೇವಾಲಯಕ್ಕೆ ಭೇಟಿ ನೀಡಿ, ಆದರೆ ಯಾವುದೇ ರೀತಿಯ ಪೂಜೆ ಸಲ್ಲಿಸಲೇಬೇಡಿ. ಅರ್ಚಕರ ತಟ್ಟೆಗೆ ಹಣ ಹಾಕಿ, ಯಾಕೆಂದರೆ ಅವರಿಂದ ಒಂದೊಳ್ಳೆ ಮಂತ್ರ ಮತ್ತು ಆಶೀರ್ವಾದ ಆದರೂ ನಾವು ಪಡೆಯುತ್ತೇವೆ. ಹಿಂದೂ ಒಗ್ಗಾಟ್ಟಾದರೆ ಯಾವ ಹಿಂದೂ ವಿರೋಧಿಗಳು ಕೂಡ ಉಳಿಯುವುದಿಲ್ಲ...... ಜೈ ಶ್ರೀ ರಾಮ್.!
Comments