ಮತ್ತೆ ಪ್ರಧಾನಿ ಆಗ್ತಾರಾ ದೇವೇಗೌಡರು..!! ದೊಡ್ಡಗೌಡರ ಮನೆಯಲ್ಲಿ ಶುರುವಾಯ್ತು ಹೋಮ-ಹವನ
ಮಾಜಿ ಪ್ರಧಾನಿ ದೇವೆಗೌಡರು ಮತ್ತೆ ಪ್ರಧಾನಿಯಾಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೀಗ ವಾಸ್ತು ತಜ್ಞರ ಸಲಹೆಯ ಮೇರೆಗೆ ನವೀಕರಣಗೊಂಡ ಸಫ್ದರ್ ಜಂಗ್ ಲೇನ್‌ನಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ಶುಕ್ರವಾರ ಹೋಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಪತ್ನಿ ಚೆನ್ನಮ್ಮ ಹಾಗೂ ಸಂಬಂಧಿಕರೊಂದಿಗೆ ವಾಸ್ತು ಹೋಮ ಮತ್ತು ಸತ್ಯನಾರಾಯಣ ಪೂಜೆ ಮಾಡಿದ್ದಾರೆ. ಮನೆಯ ವಾಸ್ತು ಸರಿಯಿಲ್ಲದ ಕಾರಣ ಮನೆಯಲ್ಲಿ ಕೆಲವೊಂದಿಷ್ಟು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಸುಮಾರು 10 ತಿಂಗಳಿಂದ ಸರ್ಕಾರಿ ಬಂಗಲೆಯ ನವೀಕರಣ ಕಾರ್ಯ ನಡೆಯುತ್ತಿದ್ದುದರಿಂದ, ಕರ್ನಾಟಕ ಭವನದಲ್ಲೇ ದೇವೇಗೌಡರು ಇದ್ದರು. ಬಂಗಲೆಯ ಮುಖ್ಯ ಬಾಗಿಲು, ದೇವರ ಮನೆ, ಅಡುಗೆ ಮನೆ, ಮಲಗುವ ಕೊಠಡಿ, ಅತಿಥಿಗಳ ಕೊಠಡಿ ಸೇರಿದಂತೆ ಬಹುತೇಕ ಕೊಠಡಿಗಳ ಬಾಗಿಲು, ಕಿಟಕಿಗಳನ್ನು ಬೇರೆಡೆ ಜೋಡಿಸುವಂತೆ ವಾಸ್ತುತಜ್ಞರು ಸೂಚಿಸಿದ್ದರಿಂದ ಮನೆಯನ್ನು ಸರಿ ಮಾಡಿಸಲಾಗಿದೆ. ಮನೆಯನ್ನು ವಾಸ್ತು ಪ್ರಕಾರ ಮಾಡಿಸಿರುವುದರ ಹಿಂದೆ ರಾಜಕೀಯದ ಪ್ರವೇಶ ಮಾಡುತ್ತಾರೆ ಎಂಬ ಗುಸು ಗುಸು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.ಮತ್ತೆ ಇವರೇ ಪ್ರಧಾನಿಯಾಗುತ್ತಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.
Comments