1996 ರ ಇತಿಹಾಸ 2019 ರಲ್ಲಿ ಪುನರಾವರ್ತನೆ..! CM HDK ಹಾಗೂ HDD ಯ ಮಾಸ್ಟರ್ ಫ್ಲಾನ್ ಏನ್ ಗೊತ್ತಾ..?
ಈಗಾಗಲೇ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ವಿರೋಧ ಪಕ್ಷಗಳು ಸಮ್ಮಿಶ್ರ ಸರ್ಕಾರದ ಮೇಲೆ ಕೆಂಡಾ ಮಂಡಲವಾಗಿವೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸಿ ರಾಜಕೀಯ ಶಕ್ತಿವನ್ನು ಬಲಪಡಿಸಲು ಚಂದ್ರ ಬಾಬುನಾಯ್ಡು ಹೆಚ್.ಡಿ. ದೇವೇಗೌಡ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚರ್ಚೆಯನ್ನು ನಡೆಸಿದರು.
1996 ರಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ತೃತೀಯ ರಂಗದ ಸರ್ಕಾರ ರಚನೆಯಾಗಿತ್ತು. ಮತ್ತೆ ಅದೇ ಸನ್ನಿವೇಶ 2019 ರಲ್ಲಿ ಮತ್ತೆ ಪುನರಾವರ್ತನೆಯಾಗಲಿದೆ ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಹೆಚ್.ಡಿ.ದೇವೇಗೌಡ ಹಾಗೂ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಲೆಕ್ಕಚಾರವಾಗಿದೆ. ಬಿಜೆಪಿ ವಿರುದ್ಧ ಕಾಂಗ್ರೆಸ್ ನೇತೃತ್ವದಲ್ಲಿ ಮಹಾಘಟಬಂಧನ್ ಪ್ರಯತ್ನವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಚಂದ್ರಬಾಬುನಾಯ್ಡು ಹೊತ್ತುಕೊಂಡಿದ್ದು, ಈ ಸಂಬಂಧ ಹೆಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರೊಂದಿಗೆ ಸುದೀರ್ಘ ಚರ್ಚೆಯನ್ನು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
Comments