ಇನ್ನೂ ಮೂರು ದಿನಗಳ ಕಾಲ CM HDK ಕಾರ್ಯಕ್ರಮಗಳು ರದ್ದು..!? ಕಾರಣ ಏನ್ ಗೊತ್ತಾ?

ಸ್ವಲ್ಪ ದಿನಗಳ ಹಿಂದಷ್ಟೆ ಸಿಎಂ ಕುಮಾರಸ್ವಾಮಿಯವರ ಆರೋಗ್ಯ ಏರು ಪೇರಾದ ಹಿನ್ನಲೆಯಲ್ಲಿ ವೈದ್ಯರು ಕೆಲ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದರು.. ವೈದ್ಯರ ಸಲಹೆ ಮೇರೆಗೆ ಕುಟುಂಬ ಸದಸ್ಯರೊಂದಿಗೆ ಸಿಎಂ ಕುಮಾರಸ್ವಾಮಿಯವರು ವಿಶ್ರಾಂತಿ ಪಡೆಯಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ ಎನ್ನಲಾಗುತ್ತಿವೆ.
ಮೈಸೂರು ಜಿಲ್ಲೆಯ ಖಾಸಗಿ ಸ್ಥಳದಲ್ಲಿ ಮೂರು ದಿನಗಳ ಕಾಲ ಅಲ್ಲೆ ಇರುವುದರಿಂದ ಯಾವುದೇ ಅಧಿಕೃತ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಉಪ ಚುನಾವಣೆ ಪ್ರಚಾರದ ನಂತರ ವಿಶ್ರಾಂತಿ ಪಡೆಯುವಂತೆ ಮುಖ್ಯಮಂತ್ರಿಗೆ ವೈದ್ಯರು ತಿಳಿಸಿದ್ದರಂತೆ. ಹಾಗಾಗಿ ಸಿಎಂ ವಿಶ್ರಾಂತಿ ಪಡೆಯುತ್ತಿದ್ದಾರೆ. ಕುಮಾರಸ್ವಾಮಿ ಅವರೊಂದಿಗೆ ಶಾಸಕಿ ಹಾಗೂ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಕೂಡ ಮೂರು ದಿನಗಳ ಕಾಲ ಸಿಎಂ ಜತೆ ಇರಲಿದ್ದಾರೆ.
Comments