ಶ್ರೀ ಆದಿನಾರಾಯಣಸ್ವಾಮಿ ದೇವಾಲಯದ ದ್ವಾರಬಾಗಿಲು ನವೀಕರಣ ಸೋಮವಾರದಿಂದ ಆರಂಭ! ಅಂದಾಜು ವೆಚ್ಚ ಐದು ಲಕ್ಷ ರೂ.






ಇಂದು ಬೆಳಿಗ್ಗೆ ಎಂಟು ಘಂಟೆಗೆ ಗಾಂಧಿ ನಗರದಲ್ಲಿರುವ ಶ್ರೀ ಆದಿನಾರಾಯಣಸ್ವಾಮಿ ದೇವಾಲಯದ ಮುಖ್ಯ ದ್ವಾರಬಾಗಿಲು ನವೀಕರಣಕ್ಕೆ ಸಂಭಂದ ಪಟ್ಟಂತೆ ಜಿಲ್ಲಾಧಿಕಾರಿ ಕರಿಗೌಡ, ಆರ್ಕಿಯಾಲಜಿಸ್ಟ್ ಶರತ್, ನಗರಸಭಾ ಅಧ್ಯಕ್ಷ ತ.ನ.ಪ್ರಭುದೇವ್, ಗಾಂಧಿ ನಗರದ ನಗರಸಭಾ ಸದಸ್ಯ ಎಂ.ಶಿವಕುಮಾರ್ ಜೊತೆಗೂಡಿ ಪರಿಶೀಲನೆ ನಡೆಸಿ ನವೀಕರಣಕ್ಕೆ ತಗಲುವ ಅಂದಾಜು ವೆಚ್ಚದ ಮಾಹಿತಿಯನ್ನು ಪಡೆದುಕೊಂಡರು. ಕಟ್ಟಡ ಭದ್ರವಾಗಿದೆ, ಗೋಡೆಗಳನ್ನು ಶುಚಿಮಾಡಲು ಕೆಲವು ರಾಸಾಯನಿಕಗಳನ್ನು ಬಳಸಬೇಕಾಗುತ್ತದೆ, ಮೇಲಿನ ಆರ್ಚ್ ಗಳನ್ನು ಸರಿಮಾಡಿ ಪೂರ್ತಿ ಚುರುಕಿ ಹಾಕಬೇಕು, ಇದಕ್ಕೆ ಹತ್ತು ಜನರ ತಂಡ ಸುಮಾರು ಒಂದು ತಿಂಗಳ ಅವಧಿಯ ಕೆಲಸ ಮಾಡಬೇಕಗುತ್ತದೆ ಎಂದು ತಜ್ಞ ಶರತ್ ಅಭಿಪಾಯ ಪಟ್ಟರು.
ಈ ಕಾರ್ಯ ಪೂರ್ಣವಾಗಿ ದಾನಿಗಳ ನೆರವಿನೊಂದಿಗೆ ನೆಡೆಯಲಿದೆ, ಸರ್ಕಾರದಿಂದ ಇದಕ್ಕೆ ಯಾವುದೇ ಅನುದಾನ ದೊರೆಯುವುದಿಲ್ಲ, ಸಾಧ್ಯವಾದಷ್ಟು ಕಡಿಮೆ ಖರ್ಚಿನಲ್ಲಿ ಕೆಲಸ ಮುಗಿಸಲು ಹೇಳಿ ಇದರ ಮೇಲ್ವಿಚಾರಣೆ ನೋಡಿಕೊಳ್ಳಲು ಗಾಂಧಿ ನಗರದ ನಗರಸಭಾ ಸದಸ್ಯ ಎಂ.ಶಿವಕುಮಾರ್ ಮತ್ತು ಸುಚೇತನ ಟ್ರಸ್ಟ್ ಪದಾಧಿಕಾರಿಗಳಿಗೆ ತಿಳಿಸಿದರು, ನಗರಸಭಾ ಅಧ್ಯಕ್ಷ ತ.ನ.ಪ್ರಭುದೇವ್ ಮಾತನಾಡಿ ನವೀಕರಣಕ್ಕೆ ಸಂಭಂದಿಸಿದಂತೆ ಚರ್ಚಿಸಲು ದಿನಾಂಕ 11 ರ ಬೆಳಿಗ್ಗೆ 8 ಘಂಟೆಗೆ ಶ್ರೀ ಆದಿನಾರಾಯಣಸ್ವಾಮಿ ದೇವಾಲಯದ ಆವರಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ, ನಗರದ ಎಲ್ಲ ನಾಗರೀಕರೂ ಹಾಜರಿದ್ದು ನವೀಕರಣಕ್ಕೆ ತನು, ಮನ, ಧನ ನೀಡುವಂತೆ ಮನವಿ ಮಾಡಿದರು. ಸಂಶೋಧಕ ವೆಂಕಟೇಶ್, ಸಾಹಿತಿ ಎಂ.ಜಿ,ಚಂದ್ರಶೇಕರ್, ಸುಚೇತನ ಟ್ರಸ್ಟ್ ಚೇರ್ಮನ್ ಮಂಜುನಾಥ್, ಅಧ್ಯಕ್ಷ ಸುನಿಲ್, ಕಾರ್ಯದರ್ಶಿ ನವೀನ್, ಖಜಾಂಚಿ ಅನಿಲ್, ಟ್ರಸ್ಟೀಗಳಾದ ಶ್ರೀನಿಧಿ, ಲೋಕೇಶ್, ಶರಣ್, ಭರತ್, ಪ್ರದೀಪ್ ಮತ್ತಿತರರು ಹಾಜರಿದ್ದರು.
Comments