ಶ್ರೀ ಆದಿನಾರಾಯಣಸ್ವಾಮಿ ದೇವಾಲಯದ ಮುಖ್ಯ ದ್ವಾರದ ಅಭಿವೃದ್ಧಿ





ಸುಚೇತನ ಸಂಸ್ಥೆ ದೊಡ್ಡಬಳ್ಳಾಪುರ ಕೈಗೊಂಡಿರುವ ಶ್ರೀ ಆದಿನಾರಾಯಣಸ್ವಾಮಿ ದೇವಾಲಯದ ಮುಖ್ಯ ದ್ವಾರದ ಅಭಿವೃದ್ಧಿ ಕಾರ್ಯ ನಗರಸಭೆ ದೊಡ್ಡಬಳ್ಳಾಪುರ ಸಹಯೋಗದಲ್ಲಿ ಮುಂದುವರಿಸಿದ್ದು ಈ ಸ್ಥಳದ ಮುಂದಿನ ಅಭಿವೃದ್ಧಿಯ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರಿಗೌಡ, ತಹಶೀಲ್ದಾರ್ ಬಿ.ಎ.ಮೋಹನ್, ನಗರಸಭೆ ಅಧ್ಯಕ್ಷ ತ.ನ.ಪ್ರಭುದೇವ್, ಗಾಂಧಿ ನಗರ ಹದಿನಾರನೇ ವಾರ್ಡ್ ಕೌನ್ಸಿಲರ್ ಎಂ.ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ಮಾಡಿದರು. ಜಿಲ್ಲಾಧಿಕಾರಿ ಕರಿಗೌಡ ಮಾತನಾಡುತ್ತಾ ನಾಳೆ ಬೆಳಿಗ್ಗೆ ಎಂಟು ಘಂಟೆಗೆ ಮತ್ತೆ ಸ್ಥಳಕ್ಕೆ ಹಂಪಿಯಲ್ಲಿ ಉತ್ಕನನ ನೆಡೆಸುತ್ತಿರುವ ಅಧಿಕಾರಿಗಳ ತಂಡದೊಡನೆ ಬಂದು ವಿವರವಾಗಿ ಪರಿಶೀಲನೆ ನಡೆಸಿ ದೇವಾಲಯ ಮತ್ತು ಆವರಣದ ಸ್ವಚ್ಛತೆಗೆ ತಗಲುವ ಅಂದಾಜು ವೆಚ್ಚವನ್ನು ಮಾಡಿಸುವುದಾಗಿ ಹೇಳಿದರು.
ನಾಳೆ ಸ್ಥಳೀಯವಾಗಿರುವ ಎಲ್ಲಾ ಹಿರಿಯರು ಮತ್ತು ನಾಯಕರು ಸಾರ್ವಜನಿಕರು ಹಾಜರಿದ್ದು ಮುಂದಿನ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲು, ಸಲಹೆಗಳನ್ನು ನೀಡಲು ಕೋರಿದ್ದಾರೆ.
ಸುಚೇತನ ಸಂಸ್ಥೆಯ ಎಲ್ಲ ಪದಾಧಿಕಾರಿಗಳು, ಸಾಹಿತಿ ಚಂದ್ರಶೇಖರ್, ಸಂಶೋಧಕ ವೆಂಕಟೇಶ, ಹೋಟೆಲ್ ಕೃಷ್ಣಮೂರ್ತಿ, ಪತ್ರಕರ್ತ ನಟರಾಜ್ ಸ್ಥಳದಲ್ಲಿ ಹಾಜರಿದ್ದರು.
Comments