ಫಲಿತಾಂಶದ ದಿನವೇ ಬಾಂಬ್ ಸಿಡಿಸಿದ ಎಚ್ ಡಿ ಕೆ..!!
ಉಪ ಚುನಾವಣೆ ಫಲಿತಾಂಶ ಬರುವ ಮುನ್ನವೇ ವ್ಯವಹಾರ ಕುದುರಿಸಲು ಮುಂದಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನ ಶಾಸಕರಿಗೆ ಬಂಪರ್ ಆಫರ್ ಕೊಟ್ಟಿತ್ತ ಎಂಬ ಪ್ರಶ್ನೆ ಉದ್ಭವವಾಗಿದೆ.
ಇಂದು ಎಚ್ ಡಿ ಕುಮಾರಸ್ವಾಮಿ ಹೊಸದೊಂದು ಬಾಂಬ್ ಅನ್ನು ಸಿಡಿಸಿದ್ದಾರೆ. ಬಿಜೆಪಿ ನಾಯಕರ ಚುನಾವಣಾ ಫಲಿತಾಂಶಕ್ಕೂ ಮೊದಲೇ ವ್ಯವಹಾರಕ್ಕೆ ಮುಂದಾಗಿದೆಯಂತೆ. ಕಾಂಗ್ರೆಸ್ ಮತ್ತು ಜೆಡಿಎಸ್ ನ ಒಬ್ಬೊಬ್ಬ ಶಾಸಕರಿಗೆ 25 ರಿಂದ 30 ಕೋಟಿ ಆಫರ್ ಕೊಟ್ಟಿದ್ದಾರಂತೆ. ಹಣದ ಹೊಳೆಯನ್ನೇ ಹರಿಸಿ ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರಂತೆ. ಎಚ್ ಡಿ ಕುಮಾರಸ್ವಾಮಿ ಯವರು ಕಳೆದ 4 ದಿನಗಳಿಂದ ಆಪರೇಷನ್ ಕಮಲದ ಬಗ್ಗೆ ಮಾಹಿತಿ ಸಂಗ್ರಹಿದ್ದಾರಂತೆ. ಇಂದು ಬಿಜೆಪಿ ಗೆ ಪೂರಕ ಫಲಿತಾಂಶ ಬಂದಿದ್ದರೆ ಆಪರೇಷನ್ ಕಮಲ ನಡೆಯುತ್ತಿತ್ತು. ಆದರೆ ಜಮಖಂಡಿ,ಬಳ್ಳಾರಿಯಲ್ಲಿ ಬಿಜೆಪಿಗೆ ಆದ ಹೀನಾಯ ಸೋಲಿನಿಂದ ಶಾಸಕರು ಬಿಜೆಪಿ ಗೆ ಜಿಗಿಯಲು ಹಿಂದೆಟ್ಟು ಹಾಕುತ್ತಿದ್ದಾರೆ ಎಂದು ಎಚ್ ಡಿ ಕೆ ಹೊಸ ಬಾಂಬ್ ಸಿಡಿಸಿದ್ದಾರೆ.
Comments