ಪರಿಸರ ಸಂರಕ್ಷಣೆಯ ಬಗ್ಗೆ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಅಚಲ ಫೌಂಡೇಶನ್ ವತಿಯಿಂದ
ದಿನಾಂಕ 4/11/2018 ರಂದು ಅಚಲ ಫೌಂಡೇಶನ್ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಶ್ರೀ ಸಂಜೀವಾನಂದಾರ್ಯರ ಸೇವಾಶ್ರಮ ಕರೇನಹಳ್ಳಿಯಲ್ಲಿ ಆಚರಿಸಲಾಯಿತು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಜೀವಾನಂದಾರ್ಯ ನಮ್ಮ ಧರ್ಮ, ಸಂಸ್ಕೃತಿ, ಆಧ್ಯಾತ್ಮಿಕ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶ್ರೀಮತಿ ಪ್ರಮೀಳಾ ಮಹದೇವ ನಮ್ಮ ನಾಡು, ನುಡಿ, ಪರಿಸರದ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸಿದರು. ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಹೇಮಂತರಾಜು ನಮ್ಮ ಭಾಷೆ, ಸಂಸ್ಕೃತಿಯ ಕುರಿತು ಮಾತನಾಡಿ ಕನ್ನಡಿಗರು ಒಗ್ಗಟ್ಟಾಗಿರುವಂತೆ ಕರೆ ನೀಡಿದರು.
ನಮ್ಮ ಜೀವನದ ಧ್ಯೇಯ ಮತ್ತು ವೈಚಾರಿಕತೆಯ ಮಹತ್ವದ ಕುರಿತು ಬಸವಣ್ಣ ನವರ ವಚನಗಳನ್ನು ಉದಾಹರಿಸಿದ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಮಹದೇವ ಮಾತಾಡಿದರು. ಗುರುವಿನ ಮಹತ್ವದ ಬಗ್ಗೆ ಶ್ರೀ ಪಿಳ್ಳಪ್ಪಾನಂದಾರ್ಯರು ತಿಳಿಸಿದರು. ಚಿತ್ರ ನಿರ್ಮಾಪಕ ಶ್ರೀ ಬದರಿನಾಥ್ ರವರು ಲಲಿತ ಕಲೆಗಳನ್ನು ಕಲಿಯಲು ಮಕ್ಕಳಿಗೆ ಪ್ರೇರಣೆ ನೀಡುವಂತೆ ಮನವಿ ಮಾಡಿದರು. ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಚಿತ್ರ ಕಲಾ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮವನ್ನು ಅಚಲ ಫೌಂಡೇಶನ್ ಅಧ್ಯಕ್ಷ ಪುಟ್ಟರಾಜು ಫೌಂಡೇಶನ್ ಧ್ಯೇಯ ಕಾರ್ಯ ಚಟುವಟಿಕೆಗಳನ್ನು ವಿವರಿಸಿ ಕಾರ್ಯಕ್ರಮ ನಡೆಸಿ ಕೊಟ್ಟರು.
Comments