ಈ ಜೆಡಿಎಸ್ ಮುಖಂಡರಿಗೆ ಸಿಕ್ಕಿದೆ ಸಚಿವ ಸ್ಥಾನ..!?

ವಿಧಾನ ಪರಿಷತ್ ಸಭಾಪತಿ ತಮಗೆ ಸಚಿವ ಸ್ಥಾನ ನೀಡಿದರೂ ಖುಷಿ, ನೀಡದಿದ್ದರೂ ಸಂತೋಷ ಎಂದಿದ್ದರು.. ಈ ವಿಚಾರದಲ್ಲಿ ಮಾಜಿ ಪ್ರದಾನಿ ಎಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ತೀರ್ಮಾನಕ್ಕೆ ಬಸವರಾಜ ಹೊರಟ್ಟಿ ಯಾವಾಗಲೂ ಬದ್ದವಾಗಿರುತ್ತೇನೆ ಎಂದಿದ್ದರು.
ಭಾನುವಾರ ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂಬ ಸುದ್ದಿ ಮಾಧ್ಯಮಗಳ ಮೂಲಕ ತಿಳಿದುಬಂದಿದೆ.. ಈ ವಿಷಯವಾಗಿ ಪಕ್ಷದಿಂದ ಯಾವ ಮಾಹಿತಿ ತಮಗಿಲ್ಲ. ನಾನಂತೂ ಸಚಿವ ಸ್ಥಾನ ಬೇಕೆಂದು ಎಂದಿಗೂ ಯಾವತ್ತೂ ಹಠ ಹಿಡಿದಿಲ್ಲ. ಸಭಾಪತಿ ಸ್ಥಾನಕ್ಕೆ ಸಾಕಷ್ಟುಗೌರವ ಇದ್ದು, ಪಕ್ಷದಿಂದ ದೊರೆತಿರುವ ಈ ಗೌರವವು ಸಮಾಧಾನ ತಂದಿದೆ ಎಂದು ಹೇಳಿದರು.
Comments