ರಾಜ್ಯದ ರೈತರಿಗೆ ಅರೆಸ್ಟ್ ವಾರೆಂಟ್..! ಸಿಎಂ ಎಚ್’ಡಿಕೆ ಇದಕ್ಕೆ ಮಾಡಿದ ಮಾಸ್ಟರ್ ಫ್ಲಾನ್ ಏನ್ ಗೊತ್ತಾ..?

ರೈತರ ಪರ ಕುಮಾರಸ್ವಾಮಿಯವರು ಯಾವಾಗಲೂ ಹೋರಾಡುತ್ತಾರೆ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.. ಬೆಳಗಾವಿ ರೈತರ ವಿರುದ್ಧ ಕೋಲ್ಕತ್ತಾ ಕೋರ್ಟ್’ನಿಂದ ಬಂಧನದ ವಾರೆಂಟ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ರೈತರ ಹಿತ ಕಾಪಾಡುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನಿರ್ದೆಶನವನ್ನು ಮಾಡಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ದೂರವಾವಣಿ ಮೂಲಕ ಮಾತನಾಡಿ ಚರ್ಚೆ ನಡೆಸಿ, ಆಕ್ಸಿಸ್ ಬ್ಯಾಂಕ್ ಕೋಲ್ಕತ್ತಾ ನ್ಯಾಯಾಲಯದಲ್ಲಿ ಬೆಳಗಾವಿ ರೈತರ ವಿರುದ್ಧ ಮೊಕದ್ದಮೆಯನ್ನು ದಾಖಲಿಸಿದೆ.ಈ ಸಂಬಂಧ ನ್ಯಾಯಾಲಯದಿಂದ ಬೆಳಗಾವಿ ರೈತರಿಗೆ ಬಂಧನದ ವಾರೆಂಟ್ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಸಂಪೂರ್ಣ ವರದಿ ಸಲ್ಲಿಸುವಂತೆ ದೂರವಾಣಿ ಮೂಲಕ ಸಿಎಂ ಸೂಚನೆ ನೀಡಿದ್ದಾರೆ. ಒಟ್ಟಾರೆ ರೈತರ ಪರ ಸಿಎಂ ಕಾರ್ಯ ನಿರ್ವಹಿಸಿದ್ದಾರೆ..
Comments