ಹೊಸ ಬಾಂಬ್ ಸಿಡಿಸಲು ರೆಬಲ್ ಸ್ಟಾರ್ ರೆಡಿ..!!
ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ 2019 ರ ಲೋಕ ಸಭೆ ಚುನಾವಣೆ ಸಿದ್ಧತೆ ನಡೆಸಿದ್ದು ಈ ಸಮಯದಲ್ಲೆ ನಟ ರೆಬಲ್ ಸ್ಟಾರ್ ಅಂಬರೀಷ್ ರವರು ದೀಪಾವಳಿಯ ನಂತರ ಹೊಸ ಬಾಂಬ್ ಸಿಡಿಸುವುದಾಗಿ ಹೇಳಿದರೆ.
ಮಂಡ್ಯ ಲೋಕಸಭೆ ಕ್ಷೇತ್ರದಿಂದ ಅಂಬರೀಷ್ ರವರು ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಿಂದ ಟಿಕೆಟ್ ಪಡೆದು ಸ್ಪರ್ದಿಸಲು ಈಗಾಗಲೇ ಚರ್ಚೆಗಳು ನಡೆದಿವೆ ಎಂದು ಮಾಹಿತಿ ಬರುತಿದ್ದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
2019 ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಬಿಜೆಪಿಯನ್ನು ಹಿಂದಿಕ್ಕಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲು ಮಹಾ ಪ್ಲಾನ್ ಒಂದನ್ನು ರೂಪಿಸಿದಂತೆ ಕಂಡುಬರುತ್ತಿದೆ. ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನ ಮೈತ್ರಿಕೂಟಕ್ಕೆ ನಟ ಅಂಬರೀಷ್ ಸ್ಟಾರ್, ಮಂಡ್ಯದಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ನ ಅಭ್ಯರ್ಥಿ ಯಾಗಿ ಅಂಬರೀಷ್ ಕಣಕ್ಕಿಳಿದರೆ ಪಕ್ಷಕ್ಕೆ ಮೇಲುಗೈ ಎಂದು ಹೇಳಲಾಗುತ್ತಿದೆ.
ಅಂಬರೀಷ್ ಹೇಳಿರುವ ಮಾತು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
Comments