ಬೆಳಗಿನ ಸಂಜೆಯ ಗೋಳು ಕೇಳುವರಾರು?







ದೊಡ್ಡಬಳ್ಳಾಪುರದ ಹಳೇ ಬಸ್ ನಿಲ್ದಾಣದಿಂದ ಬೆಂಗಳೂರಿನ ಕಾವೇರಿ ಭವನ ವೃತ್ತದ ನಡುವೆ ಪ್ರಯಾಣಿಸುವ ನಗರದ ನಾಗರೀಕರು ಮತ್ತು ವಿದ್ಯಾರ್ಥಿಗಳಿಗೆ KSRTC/BMTC ಬಸ್ ಗಳಿಂದ ದಿನೇ ದಿನೆ ಕಿರಿಕಿರಿ ಜಾಸ್ತಿಯಾಗುತ್ತಿದೆ. ಬೆಳಿಗ್ಗೆ ಮತ್ತು ಸಂಜೆ ಸಮಯಗಳಲ್ಲಿ ಎರಡೂ ಕಡೆ ನಿಲ್ದಾಣಗಳಲ್ಲೂ ಬಸ್ ಗಳ ಕೊರತೆ ಕಾಡುತ್ತದೆ. ಇದು ಒಂದು ದಿನದ ಕತೆಯಲ್ಲ! ಬಹುತೇಕ ಪ್ರತಿದಿನದ ಕರ್ಮ! ಬೇರೆ ಊರುಗಳಿಗೆ ಹೋಲಿಸಿಕೊಂಡರೆ ದೊಡ್ಡಬಳ್ಳಾಪುರದ ಈ ಸಮಸ್ಯೆ ಬೃಹತ್ ಆಗಿದೆ. ಈ ರೀತಿ ದೂರುತ್ತಿರುವುದು ಕನಿಷ್ಠ ಎಂದರೂ ನೂರಾರುಬಾರಿ! ಆದರೂ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ? ಈ ನಿಟ್ಟಿನಲ್ಲಿ ಶಾಸಕರು, ನಗರಸಭೆಯವರು, ಪೋಲೀಸರು ಖಾಯಂ ಆಗಿ ದೊಡ್ಡಬಳ್ಳಾಪುರದ ಪ್ರಯಾಣಿಕರನ್ನು ಕಾಡುತ್ತಿರುವ ಬಸ್ ಗಳ ಅಭಾವದ ಸಮಸ್ಯೆಗೆ ಮಂಗಳ ಹಾಡಲಿ. ಇದೇನು ದೊಡ್ಡ ಸಮಸ್ಯೆಯಲ್ಲ, ಮನಸು ಮಾಡಬೇಕಷ್ಟೇ. ಚಿತ್ರ, ವರದಿ- ರಾಜಶೇಕರ ಶೆಟ್ಟಿ, ಸಂಪಾದಕರು, ಹಾಯ್ ದೊಡ್ಡಬಳ್ಳಾಪುರ.
Comments