೬೩ನೇ ಕನ್ನಡ ರಾಜ್ಯೋತ್ಸವ ಆಚರಣೆ
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಂದು ನಗರದಲ್ಲಿ ೬೩ ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು, ತಾಲ್ಲೂಕು ಕಛೇರಿಯಲ್ಲಿ ಬೆಳಿಗ್ಗೆ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮವನ್ನು ಶಾಸಕ ವೆಂಕಟರಮಣಯ್ಯ ಉದ್ಘಾಟಿಸಿದರು. ತಾಲ್ಲೂಕು ದಂಡಾಧಿಕಾರಿ ಬಿ.ಎ.ಮೋಹನ್, ಕಸಾಪ ಪದಾಧಿಕಾರಿಗಳು ಹಾಗೂ ಕನ್ನಡಪರ ಹೋರಾಟಗಾರರು ಹಾಜರಿದ್ದರು, ನಂತರ ಭುವನೇಶ್ವರಿಯ ಮೆರವಣಿಗೆಯು ತಾಲ್ಲೂಕು ಕಛೇರಿಯಿಂದ ಹೊರಟು ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಹಳೇ ಬಸ್ ನಿಲ್ದಾಣದಲ್ಲಿರುವ ಡಾ.ರಾಜಕುಮಾರ್ ಕಲಾ ಮಂದಿರ ತಲುಪಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಹಾಜರಿದ್ದ ನಗರಸಭಾಧ್ಯಕ್ಷ ತ.ನ. ಪ್ರಭುದೇವ್ ಪ್ರಸ್ಥಾವಿಕ ಭಾಷಣವನ್ನು ಮಾಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ವೆಂಕಟರಮಣಯ್ಯ ವಹಿಸಿದ್ದರು, ತಹಸೀಲ್ದಾರ್ ಮೋಹನ್, ಜಿ.ಪಂ.ಅಧ್ಯಕ್ಷೆ ಜಯಲಕ್ಷ್ಮಿ, ಜಿ.ಪಂ.ಸದಸ್ಯೆ ಪದ್ಮಾವತಿ ಮುನೇಗೌಡ, ತಾ.ಪಂ.ಅಧ್ಯಕ್ಷ ಶ್ರೀವತ್ಸ, ಪ್ರಾಂಶುಪಾಲ ರವಿಕಿರಣ್, ಕನ್ನಡಪರ ಹೋರಾಟಗಾರ ಸಂಜೀವನಾಯ್ಕ, ಕಸಾಪ ಅಧ್ಯಕ್ಷೆ ಪ್ರಮೀಳ ಮಹದೇವ್, ನಗರಸಭಾ ಉಪಾಧ್ಯಕ್ಷೆ ಜಯಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ನಗರಸಭಾ ಸದಸ್ಯರುಗಳು ಹಾಗೂ ಸನ್ಮಾನಿತರು ಹಾಜರಿದ್ದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಲವರಿಗೆ ಕನ್ನಡದ ಕಟ್ಟಾಳು ಬಿರುದನ್ನು ನೀಡಿ ಸನ್ಮಾನಿಸಲಾಯಿತು.
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕ ಹಾಗೂ ಕಾರ್ಯಕ್ರಮಗಳ ಪ್ರಚಾರಕ ಶಫಿ ತನ್ನ ಆಟೋಗೆ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳನ್ನು ಅಳವಡಿಸಿ ಕನ್ನಡಾಭಿಮಾನ ತೋರಿ ರಾಜ್ಯೋತ್ಸವ ಆಚರಿಸಿದಕ್ಕೆ ಕಸಾಪ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಸ್ವಾಮಿ ವಿವೇಕಾನಂದ ಸರ್ಕಾರಿ ಶಾಲೆಯಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷೆ ಪ್ರಮೀಳಮಹಾದೇವ್ ರಿಂದ ಧ್ವಜಾರೋಹಣ, ಶಾಲೆಯ ಮುಖ್ಯ ಶಿಕ್ಷಕರಾದ ಡಾ.ಹುಲಿಕಲ್ ನಟರಾಜ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಭಾ಼ಷೆಯ ಭವಿಷ್ಯ, ಉಳಿವಿಗೆ ನಮ್ಮ ತುಡಿತ ಹಾಗೂ ಕಳವಳಗಳ ಬಗ್ಗೆ ಪ್ರೊಫೆಸರ್ ಕೆ.ಆರ್. ರವಿಕಿರಣ್ ಮಾತನಾಡಿದರು, ಮಕ್ಕಳು ಮುಂದಿನ ದಿನಗಳಲ್ಲಿ ಪದವಿಯಲ್ಲಿ ಕನ್ನಡವನ್ನು ಐಚ್ಛಿಕ ವಿಷಯವನ್ನಾಗಿ ಓದಿ ಕನ್ನಡ ಶಿಕ್ಷಕರಾಗಲು ಮನಸ್ಸು ಮಾಡುವಂತೆ ಕಸಾಪ ಅಧ್ಯಕ್ಷೆ ಮಕ್ಕಳಲ್ಲಿ ಮನವಿ ಮಾಡಿಕೊಂಡರು. ಎನ್.ಸಿ.ಲಕ್ಷ್ಮೀ, ನ.ಮಹಾದೇವ್, ಪರ್ವತಯ್ಯ ಹಾಜರಿದ್ದರು.
Comments