ಸುಚೇತನ ಸಂಸ್ಥೆಯ ವತಿಯಿಂದ ಆದಿನಾರಾಯಣ ದೇಗುಲದ ಆವರಣದಲ್ಲಿ ರಾಜ್ಯೋತ್ಸವ ಆಚರಣೆ





ನಗರದ ಸುಚೇತನಾ ಎಜುಕೇಷನಲ್ ಮತ್ತು ಛಾರಿಟಬಲ್ ಟ್ರಸ್ಟ್ ವತಿಯಿಂದ ಗಾಂಧಿನಗರದಲ್ಲಿರುವ ಆದಿನಾರಾಯಣ ದೇವಸ್ಥಾನದ ಆವರಣದಲ್ಲಿ ೬೩ ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು, ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಹಾಗೂ ಸ್ಥಳೀಯ ನಾಗರೀಕರು ಹಾಜರಿದ್ದು ರಾಜ್ಯೊತ್ಸವ ಆಚರಿಸಿದರು. ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ಅಂಗವಾಗಿ ಬಹಳ ವರ್ಷಗಳಿಂದ ಕಸದ ಕೊಂಪೆಯಾಗಿದ್ದ ಈ ಜಾಗವನ್ನು ಸುಚೇತನ ಸಂಸ್ಥೆಯವರು ಸ್ವಚ್ಛಗೊಳಿಸಿವ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಹಂತ ಹಂತವಾಗಿ ಈ ಜಾಗವನ್ನು ಅಭಿವೃದ್ಧಿ ಪಡಿಸುವ ಪಣ ತೊಟ್ಟಿದ್ದಾರೆ. ಇಂದು ನಗರದ ಪೌರಾಯುಕ್ತ ಮಂಜುನಾಥ್ ಸ್ಥಳಕ್ಕೆ ಆಗಮಿಸಿ ಜಾಗದ ಪರಿಶೀಲನೆ ನಡೆಸಿದರು, ಟ್ರಸ್ಟ್ ಮಾಡುತ್ತಿರುವ ಕಾರ್ಯವನ್ನು ಮೆಚ್ಚಿ, ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ನಗರಸಭೆಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
Comments