ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್: 'ಸಾಲ ಮನ್ನಾ' ಗೆ ಡೇಟ್ ಫಿಕ್ಸ್..!

ಈಗಾಗಲೇ ಸಾಲ ಮನ್ನಾ ಯಾವಾಗ ಆಗುತ್ತದೆ ಎನ್ನುತ್ತಿದ್ದ ರೈತರಿಗೆ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಸಿಹಿ ಸುದ್ದಿಯನ್ನು ನೀಡಿದ್ದಾರೆ. ತಮ್ಮ ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಸಾಲ ಮನ್ನಾದ ನಿರೀಕ್ಷೆಯಲ್ಲಿ ಕಾಯುತ್ತಿದ್ದ ರೈತರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ನವೆಂಬರ್ 20ರೊಳಗಾಗಿ ಎಲ್ಲ ರೈತರಿಗೂ ಸಾಲ ಋಣಮುಕ್ತ ಪತ್ರ ನೀಡುವುದಾಗಿ ಮಾಹಿತಿ ಹೊರಬಿದ್ದಿದೆ.
ರೈತರ ಸಾಲ ಮನ್ನಾ ಯೋಜನೆಗೆ ರಾಷ್ಟ್ರೀಕೃತ ಬ್ಯಾಂಕುಗಳು ಅಸಹಕಾರ ತೋರಿಸುತ್ತಿವೆ., ರೈತರ ಬ್ಯಾಂಕ್ ಖಾತೆ ಹಾಗೂ ಸಾಲದ ವಿವರ ನೀಡಲು ಬ್ಯಾಂಕುಗಳು ಹಿಂದೇಟು ಹಾಕುತ್ತಿವೆ. ಒಂದು ವೇಳೆ ರಾಷ್ಟ್ರೀಕೃತ ಬ್ಯಾಂಕುಗಳು ಇದೇ ವರ್ತನೆ ಮುಂದುವರಿಸಿದರೆ ನೇರವಾಗಿ ರೈತರ ಖಾತೆಗೆ ಸರ್ಕಾರವೇ ಹಣ ಜಮಾ ಮಾಡಲಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದ್ದಾರೆ. ಒಟ್ಟಾರೆ ಸಮ್ಮಿಶ್ರ ಸರ್ಕಾರದಿಂದ ರೈತರಿಗೆ ಒಳ್ಳೆಯದಾದರೆ ಸಾಕು..
Comments