ಜೆಡಿಎಸ್ ಪರ ಪ್ರಚಾರ ಮಾಡಿದ್ರು ಸ್ಯಾಂಡಲ್ ವುಡ್’ನ ಈ ಸ್ಟಾರ್  

01 Nov 2018 12:02 PM |
4059 Report

ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ..ಶಿವಮೊಗ್ಗ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಸ್ ಮಧು ಬಂಗಾರಪ್ಪ ಪರ ನಟಿ ಪೂಜಾಗಾಂಧಿ ಮತಯಾಚನೆ ಮಾಡಿದ್ದಾರೆ.  

ನಗರದ ಕೆಲವೆಡೆ ಮಧು ಬಂಗಾರಪ್ಪ ಪರ ನಟಿ ಪೂಜಾಗಾಂಧಿ ಪ್ರಚಾರ ನಡೆಸಿದ್ದು, ಪೂಜಾಗಾಂಧಿಗೆ ಹೊಸಮನೆ ಬಡಾವಣೆಯ ಜೆಡಿಎಸ್ ಮುಖಂಡರಾದ ಭವಾನಿ ನರಸಿಂಹ, ನರಸಿಂಹ ಗಂಧದ ಮನೆ ಹಾಗೂ ಪಕ್ಷದ ಕಾರ್ಯಕರ್ತರು, ಮುಖಂಡರು ಪ್ರಚಾರದಲ್ಲಿ ಭಾಗವಹಿಸಿ ಸಾಥ್ ನೀಡಿದರು. ಒಟ್ಟಾರೆ ಈ ಭಾರಿ ಜೆಡಿಎಸ್ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯೋದು ಗ್ಯಾರೆಂಟಿ..

Edited By

hdk fans

Reported By

hdk fans

Comments