ಕುಮಾರ್ ಬಂಗಾರಪ್ಪ #Metoo ಆರೋಪಕ್ಕೆ CM HDK ಕೊಟ್ರು ಸಖತ್ ಟಾಂಗ್..!?
ಮೀಟೂ ಕಾವು ಸಿನಿಮಾರಂಗಕ್ಕೆ ಮಾತ್ರವಲ್ಲ.. ಇದೀಗ ರಾಜಕಾರಣಕ್ಕೂ ಕಾಲಿಟ್ಟಿದ್ದೆ. ಸಿಎಂ ಹೆಚ್ಡಿಕೆ ವಿರುದ್ಧ ಮೀಟೂ ಆರೋಪ ಕೇಳಿಬರಬಹುದು ಅಂತಾ ಶಾಸಕ ಕುಮಾರ್ ಬಂಗಾರಪ್ಪ ಶಿವಮೊಗ್ಗದಲ್ಲಿ ಬಾಂಬ್ ಸಿಡಿಸಿದ್ದರು… ರಾಧಿಕಾ ಕುಮಾರಸ್ವಾಮಿ ಅವರನ್ನ ಚುನಾವಣೆಗೆ ಕರೆತನ್ನಿ ಎಂದು ಹೆಚ್ಡಿಕೆಗೆ ಕುಮಾರ್ ಬಂಗಾರಪ್ಪ ಸವಾಲು ಹಾಕಿದ್ದರು.
ಇದಕ್ಕೆ ಸಿಎಂ ಕುಮಾರಸ್ವಾಮಿಯವರು ನಾನು ಎಲ್ಲವನ್ನೂ ಎದುರಿಸುವ ಸಾಮರ್ಥ್ಯವನ್ನು ಹೊಂದಿದ್ದೇನೆ. ನಾನು ಯಾವುದೇ ರೀತಿಯ ತಪ್ಪನ್ನು ಮಾಡಿಲ್ಲ. ಆದರೆ ಕುಮಾರ್ ಬಂಗಾರಪ್ಪ ಅವರ ಅಭಿರುಚಿ ಪ್ರದರ್ಶನವಾಗಿದೆ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.ಚುನಾವಣೆ ಸಂದರ್ಭದಲ್ಲಿ ಪರ್ಸನಲ್ ವಿಚಾರದ ಬಗ್ಗೆ ಚರ್ಚೆ ಮಾಡಲು ಹೋಗಲ್ಲ ಎಂದು ಎಚ್ಚರಿಗೆ ನೀಡಿದ್ದಾರೆ.
Comments