ಬಿಎಸ್’ವೈಗೆ ಬಹಿರಂಗವಾಗಿಯೇ ಸವಾಲು ಹಾಕಿದ ಸಿಎಂ ಹೆಚ್’ಡಿಕೆ..!

ದೋಸ್ತಿ ಸರಕಾರವು ಸರಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿಸಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಕಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಬಹಿರಂಗ ಸವಾಲು ಹಾಕಿದ್ದಾರೆ.
ಇಂದು ಶಿವಮೊಗ್ಗ ಲೋಕಸಭಾ ಉಪಚುನಾವಣೆ ಹಿನ್ನಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯಾದ ಮಧು ಬಂಗಾರಪ್ಪನವರ ಪರವಾಗಿ ಸೊರಬ ತಾಲೂಕಿನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡುವ ಸಂದರ್ಭದಲ್ಲಿ ನಾನು ವರ್ಗಾವಣೆ ದಂಧೆಯಲ್ಲಿ ಒಂದೇ ಒಂದು ರೂಪಾಯಿ ತೆಗೆದುಕೊಂಡಿದ್ದೇನೆ ಅಂತ ಸಾಭೀತು ಮಾಡಿದ್ರೆ ನಾನೇ ಮನೆಗೆ ಹೋಗ್ತಿನಿ. ಒಂದೇ ವೇದಿಕೆಗೆ ಬರಲಿ ನಾನು ಸಿದ್ದ ಅಂತ ಕುಮಾರಸ್ವಾಮಿಯವರು ತಿಳಿಸಿದರು.
Comments