ವಿಶ್ವಜಿತ್ ಅತಿರಾತ್ರ ಮಹಾಸೋಮಯಾಗಕ್ಕೆ ಆಹ್ವಾನ ನೀಡಲು ಆಗಮಿಸುತ್ತಿರುವ ಶ್ರೀಗಳು



2019 ಫೆಬ್ರವರಿ ತಿಂಗಳ ದಿನಾಂಕ 18 ರಿಂದ 24 ರವರೆಗೆ ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂಡೇವೂರು, ಉಪ್ಪಳ, ಕಾಸರಗೋಡು ಜಿಲ್ಲೆ, ಇಲ್ಲಿ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗಕ್ಕೆ ನಮ್ಮ ಊರಿನ ನಾಗರೀಕರಿಗೆ ಆಹ್ವಾನ ನೀಡಲು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ದೊಡ್ಡಬಳ್ಳಾಪುರಕ್ಕೆ ದಿನಾಂಕ 4-11-2018 ಭಾನುವಾರ ಆಗಮಿಸಲಿದ್ದಾರೆ, ವಿಶ್ವಜಿತ್ ಅತಿರಾತ್ರ ಮಹಾಸೋಮಯಾಗದ ಬೆಂಗಳೂರು ಸಮಿತಿ ಗೌರವಾಧ್ಯಕ್ಷರಾದ ಹೆಚ್.ಪಿ.ಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ, ವಿಶ್ವಜಿತ್ ಅತಿರಾತ್ರ ಮಹಾಸೋಮಯಾಗದ ಬೆಂಗಳೂರು ಸಮಿತಿ ಅಧ್ಯಕ್ಷರಾದ ಡಾ|| ಜಿ.ರಮೇಶ್, ನಿವೃತ್ತ ಡಿಐಜಿ, ಕೆ.ನಾರಾಯಣ್, ಮಾಲೀಕರು ಸ್ಪಾನ್ ಪ್ರಿಂಟರ್ಸ್, ದೇವಾಂಗ ಜ್ಯೋತಿ ಪತ್ರಿಕೆ ಸಂಪಾದಕ ಕುದೂರು ರಾಜಶೇಕರ್, ಹಾಗೂ ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಅಧ್ಯಕ್ಷ ಪಿ.ಸಿ.ಲಕ್ಷ್ಮೀನಾರಾಯಣ್ ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ.
ಕಾರ್ಯಕ್ರಮ ದಿನಾಂಕ 4-11-2019 ರ ಭಾನುವಾರ ಸಂಜೆ 4-30 ಕ್ಕೆ ನಗರದ ರಂಗಪ್ಪ ಸರ್ಕಲ್ ಬಳಿ ಇರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ, ನಗರದ ನಾಗರೀಕರು ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಶ್ವಜಿತ್ ಅತಿರಾತ್ರ ಮಹಾಸೋಮಯಾಗದ ಬೆಂಗಳೂರು ಸಮಿತಿಯ ದೊಡ್ಡಬಳ್ಳಾಪುರದ ಸದಸ್ಯರು ವಿನಂತಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗೆ: ಆರೂಡಿ ರಮೇಶ್-9448242282 ಡಾ.ನಾರಾಯಣ್- 9449169640 ಕೆ.ಎಂ.ಕೃಷ್ಣಮೂರ್ತಿ-9448612253 ಎಸ್.ಶಿವಾನಂದ್-9964280222 ಬಿ.ಎನ್.ಉಮಾಶಂಕರ್-9986029580
Comments