ಖಾಸಗಿ ಸಾಲ ಮನ್ನಾಕ್ಕೂ ಮುಂದಾದ ರಾಜ್ಯ ಸರ್ಕಾರ..! ಈ ಬಗ್ಗೆ ಹೆಚ್’ಡಿಕೆ ಹೇಳಿದ್ದೇನು..?

ಈಗಾಗಲೇ ಸಾಲ ಮನ್ನಾ ವಿಷಯದಲ್ಲಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿರುವ ಕುಮಾರಸ್ವಾಮಿಯವರ ಸರ್ಕಾರ ಇದೀಗ ಮತ್ತೊಂದು ಯೋಜನೆಯನ್ನು ಜಾರಿಗೆ ತರುವ ಚಿಂತನೆಯಲ್ಲಿದೆ.ಖಾಸಗಿಯವರ ಬಳಿ ಪಡೆದ ಸಾಲವನ್ನೂ ಮನ್ನಾ ಮಾಡುವ ಸಂಬಂಧ ಋಣಮುಕ್ತ ಯೋಜನೆ ಶೀಫ್ರದಲ್ಲೇ ಜಾರಿಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಶುಕ್ರವಾರ ಮಳವಳ್ಳಿಯಲ್ಲಿ ಚುನಾವಣಾ ಪ್ರಚಾರ ವೇಳೆ ಮಾತನಾಡುವ ಸಂದರ್ಭದಲ್ಲಿ ಜನಪರ ಕಾರ್ಯಕ್ರಮಗಳ ವಿರುದ್ಧ ಬಿಜೆಪಿ ವ್ಯವಸ್ಥಿತ ಅಪಪ್ರಚಾರ ಮಾಡುತ್ತಿದೆ. 12 ವರ್ಷಗಳ ಹಿಂದೆ ಮೈತ್ರಿ ಸರಕಾರ ಇದ್ದಾಗಲೂ ಈ ಮಟ್ಟಿಗೆ ಅಪಪ್ರಚಾರ ಮಾಡುತ್ತಿರಲಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಇನ್ನು ಈ ಉಪ ಚುನಾವಣೆಯನ್ನು ನಾವು ನಿರೀಕ್ಷಿಸಿರಲಿಲ್ಲ. ನಾಲ್ಕೈದು ತಿಂಗಳಿಗೆ ಲೋಕಸಭೆ ನಡೆಯುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಂದಿರಲಿಲ್ಲ. ದೇವರ ಆಶೀರ್ವಾದಿಂದ ಅನಿವಾರ್ಯವಾಗಿ ಸರ್ಕಾರ ರಚಿಸಬೇಕಾಯಿತು ಎಂದು ಕುಮಾರಸ್ವಾಮಿಯವರು ತಿಳಿಸಿದ್ದಾರೆ.
Comments