ದೇವೆಗೌಡರ ಬಿಗ್ ಸ್ಕೆಚ್’ನಲ್ಲಿ ಸಿಲುಕಿಕೊಂಡ ಯಡಿಯೂರಪ್ಪ..! ಜೆಡಿಎಸ್ ನ ಮುಂದಿನ ನಡೆಯೇನು..?
ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಸಾಕಷ್ಟು ಸಮಸ್ಯೆಗಳು ಉದ್ಭವವಾಗುತ್ತಿರುತ್ತವೆ. ರಾಜ್ಯ ರಾಜಕಾರಣದಲ್ಲಿ ಉಪ ಚುನಾವಣೆ ಕೇವಲ ಎಲೆಕ್ಷನ್ ಅಂತ ಆಗದೇ ಪಕ್ಷಗಳ ಪ್ರತಿಷ್ಠೆಯ ಕಣವಾಗಿ ಬಿಟ್ಟಿದೆ.. ಎರಡು ವಿಧಾನಸಭಾ ಮತ್ತು ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಯು ನಡೆಯಲಿದೆ ಅದಕ್ಕೆ ಎಲ್ಲಾ ಪಕ್ಷಗಳು ಕೂಡ ತಯಾರಿಯನ್ನು ಮಾಡಿಕೊಳ್ಳುತ್ತಿವೆ ಆದ್ರೆ ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರನ್ನು ಸೋಲಿಸುವ ಮೂಲಕ ಮಾಜಿ ಸಿಎಂ ಯಡಿಯೂರಪ್ಪರಿಗೆ ಮುಖಭಂಗ ಮಾಡಲು ಹೆಚ್.ಡಿ.ದೇವೇಗೌಡರು ಸಖತ್ ಆಗಿರೋ ಪ್ಲಾನ್ ಮಾಡಿದ್ದಾರಂತೆ. ತಂದೆಯ ಸಲಹೆಯಂತೆ ಸಿಎಂ ಕುಮಾರಸ್ವಾಮಿ ಕೈ ಜೋಡಿಸಲು ಮುಂದಾಗಿದ್ದಾರೆ.
ಶಿವಮೊಗ್ಗ ಚುನಾವಣೆಯ ನೇತೃತ್ವವನ್ನು ಕುಮಾರಸ್ವಾಮಿ ಅವರು ವಹಿಸಿಕೊಂಡಿದ್ದು, ರಾಮನಗರ ಮತ್ತು ಮಂಡ್ಯಕ್ಕಿಂತ ಶಿವಮೊಗ್ಗದಲ್ಲೇ ಹೆಚ್ಚು ದಿನ ಪ್ರಚಾರ ಮಾಡಲು ಸಿಎಂ ಚಿಂತಿಸಿದ್ದಾರಂತೆ. ಮಂಡ್ಯಕ್ಕೆ 1 ದಿನ, ರಾಮನಗರಕ್ಕೆ 2 ದಿನ, 5ಕ್ಕೂ ಹೆಚ್ಚು ದಿನ ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರ ಸಿಎಂ ಪ್ರಚಾರ ಮಾಡಲಿದ್ದಾರಂತೆ. ಬಿಜೆಪಿ ಭದ್ರಕೋಟೆ ಮತ್ತು ಸ್ವಕ್ಷೇತ್ರದಲ್ಲಿಯೇ ಯಡಿಯೂರಪ್ಪರಿಗೆ ತಿರುಗೇಟು ನೀಡಲು ದೇವೇಗೌಡರು ಮಾಸ್ಟರ್ ಪ್ಲಾನ್ ಮಾಡಿದ್ದಾರಂತೆ. ಕಾಂಗ್ರೆಸ್ನ ಬೈ ಎಲೆಕ್ಷನ್ ಸ್ಪೆಶಲಿಸ್ಟ್ ಸಚಿವ ಡಿ.ಕೆ.ಶಿವಕುಮಾರ್ ಸಹ ದೇವೇಗೌಡರಿಗೆ ಸಾಥ್ ನೀಡಲಿದ್ದಾರೆ.
Comments