ಸಿಎಂ ಕುಮಾರಸ್ವಾಮಿ ತೆಗೆದುಕೊಂಡ್ರು ಮಹತ್ವದ ನಿರ್ಧಾರ..!
ಸಿಎಂ ಕುಮಾರಸ್ವಾಮಿಯವರು ಮತ್ತೊಮ್ಮೆ ಜನ ಮೆಚ್ಚುವ ಕೆಲಸ ಮಾಡಿದ್ದಾರೆ. ನವೆಂಬರ್ 1 ರಿಂದ ಎಲ್ಲಾ ಕಡತಗಳಲ್ಲೂ ಕನ್ನಡ ಬಳಕೆ ಕಡ್ಡಾಯವಾಗಿರಬೇಕು ಎಂದು ಸಿಎಂ ಕುಮಾರಸ್ವಾಮಿಯವರು ಸೂಚನೆ ನೀಡಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಗೆ ಈ ಬಗ್ಗೆ ಸೂಚನೆಯನ್ನು ನೀಡಿದ್ದಾರೆ,
ಕನ್ನಡದಲ್ಲಿರುವ ಕಡತಗಳಿಗೆ ಮಾತ್ರ ಸಹಿ ಮಾಡುವುದಾಗಿ ಸಿಎಂ ಕುಮಾರಸ್ವಾಮಿಯವರು ಹೇಳಿದ್ದಾರೆ. ನವೆಂಬರ್ 1 ರಿಂದ ಎಲ್ಲಾ ಸರ್ಕಾರಿ ಕಡತ ಕನ್ನಡಮಯವಾಗಲಿದ್ದು. ಈ ಸಂಬಂಧ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದಾರೆ. ಯಾವುದೇ ಆಡಳತ ಕಚೇರಿಗಳಿಂದ ಸಿಎಂ ಕಚೇರಿಗೆ ಬರುವ ಕಡತಗಳು ಕನ್ನಡದಲ್ಲೇ ಇರಬೇಕು. ಇಂಗ್ಲೀಷ್ ಕಡತಗಳನ್ನು ಸ್ವೀಕರಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ ನೀಡಿದ್ದಾರೆ.
Comments