CM HDK ಜನತಾ ದರ್ಶನದಲ್ಲಿ ಸ್ವೀಕರಿಸಿದ ಮನವಿಗಳು ಎಷ್ಟು ಗೊತ್ತಾ..!?
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜನರ ಧ್ವನಿಯಾಗಿದ್ದಾರೆ ಅನ್ನುವುದಕ್ಕೆ ಜನತಾದರ್ಶನವೇ ಉದಾಹರಣೆಯಾಗಿದೆ. ಶನಿವಾರ ತಪ್ಪದೆ ಜನತಾದರ್ಶನ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನರ ವಿಶ್ವಾಸವನ್ನು ಗಳಿಸಿದ್ದಾರೆ.
ಜೂನ್ 1 ರಿಂದ ಇದುವರೆಗೂ 17,723 ಮನವಿಗಳು ಸ್ವೀಕಾರ ಮಾಡಿದ್ದಾರೆ.. ಅವುಗಳಲ್ಲಿ ಶೇ 50 ದೂರುಗಳಿಗೆ ಈಗಾಗಲೇ ಪರಿಹಾರ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಅಷ್ಟೆ ಅಲ್ಲದೆ ಜನತಾದರ್ಶನ ಕಾರ್ಯಕ್ರಮವು ಎಲ್ಲ ಜಿಲ್ಲೆಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗಿದ್ದು ಎಂದು ಸಿಎಂ ಹೆಚ್’ಡಿಕೆ ತಿಳಿಸಿದ್ದಾರೆ.
Comments