CM HDK ಹೆಸರಿನಲ್ಲಿ ಸಂಕಲ್ಪ ಮಾಡಿಸಿದ ಡಿಕೆ ಶಿವಕುಮಾರ್..! ಕಾರಣ ಏನ್ ಗೊತ್ತಾ..?

ಈಗಾಗಲೇ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಬಳ್ಳಾರಿ ಲೋಕಸಭಾ ಚುನಾವಣೆಯ ಜವಾಬ್ದಾರಿಯನ್ನು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ವಹಿಸಿಕೊಂಡಿದ್ದಾರೆ. ಇದರ ನಡೆವೆ ತುಮಕೂರಿನ ನೊಣವಿನಕೆರೆ ಮಠಕ್ಕೆ ನೀಡಿ ತಮ್ಮ ಆರಾಧ್ಯ ದೈವ ಕಾಡು ಸಿದ್ದೇಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ.
ನೋಣವಿನಕೆರೆ ಮಠದಲ್ಲಿ ಗಣಪತಿ ಹಾಗೂ ಮೃತ್ಯುಂಜಯ ಹೋಮದಲ್ಲಿ ಪಾಲ್ಗೊಂಡಿದ್ದ ಡಿಕೆಶಿವಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್ ಉಗ್ರಪ್ಪ ಮತ್ತು ಸಿಎಂ ಕುಮಾರಸ್ವಾಮಿ ಹಾಗೂ ಕುಟುಂಬದ ಹೆಸರಿನಲ್ಲಿ ಸಂಕಲ್ಪ ಕೈಗೊಂಡಿದ್ದು ಬಹಳ ವಿಶೇಷವಾಗಿತ್ತು. ಬಳಿಕ ಸುದ್ದಿಗಾರರೊಂದಿಗೆ ಜೊತೆಗೆ ಮಾತನಾಡಿದ ಅವರು, ನೋಣವಿನಕೆರೆ ಕಾಡುಸಿದ್ದೇಶ್ವರ ಪೀಠ ನಾನು ನಂಬಿರುವ ಮಹಾ ಕ್ಷೇತ್ರ, ಇದು ನನಗೆ ಶಕ್ತಿ ಹಾಗೂ ಮಾರ್ಗದರ್ಶನವನ್ನು ನೀಡಿದೆ. ಹಾಗಾಗಿ ನಮ್ಮ ಸರ್ಕಾರಕ್ಕೂ ಕೂಡ ಒಳ್ಳೆಯದನ್ನೆ ಮಾಡಲಿ ಎಂದು ಪೂಜೆ ಮಾಡಿಸಿದ್ದೇನೆ ಎಂದರು..
Comments