ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ರಾಜೀನಾಮೆ ಬಗ್ಗೆ ಎಚ್ ವಿಶ್ವನಾಥ್ ಸ್ವಷ್ಟನೆ

ಜೆಡಿಎಸ್ ಅಧ್ಯಕ್ಷರಾದ ಎಚ್ ವಿಶ್ವನಾಥ್ ರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾಗಿದ್ದಾರೆ ಎಂಬ ವದಂತಿಗೆ ಎಚ್ ವಿಶ್ವನಾಥ ಅವರು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತೆರೆ ಎಳೆದಿದ್ದಾರೆ.
ಎಚ್ ವಿಶ್ವನಾಥ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾಗ ಜೆಡಿಎಸ್ ನ ವರಿಷ್ಠರು ಬರಲಿಲ್ಲ ಎಂದು ಯಾರಾದರೂ ರಾಜೀನಾಮೆ ನೀಡುತ್ತಾರೆಯೇ. ಜೆಡಿಎಸ್ ನ ರಾಷ್ಟ್ರೀಯ ಅಧ್ಯಕ್ಷರ ಎಚ್ ಡಿ ದೇವೇಗೌಡ ಮತ್ತು ಎಚ್ ಡಿ ಕುಮಾರಸ್ವಾಮಿಯವರು ದೂರವಾಣಿ ಮೂಲಕ ಸಂಪರ್ಕಿಸಿದರು, ವೈದ್ಯರ ಜೊತೆ ಕೂಡ ಚರ್ಚಿಸಿದರೆ. ನೆನ್ನೆಯಷ್ಟೇ ಜೆಡಿಎಸ್ ನ ಪ್ರದಾನ ಕಚೇರಿಯಲ್ಲಿ ಕೆಲಸಮಾಡಿದೇನೆ, ಪಕ್ಷದ ಕಾರಿನಲ್ಲೇ ಮೈಸೂರಿಗೆ ತೆರೆಳಿದ್ದೇನೆ. ಯಾರೋ ಇಲ್ಲ ಸಲ್ಲದವರು ವದಂತಿ ಅಭಿಸುತಿದ್ದರೆ. ಇದೆ 29 ರಿಂದ ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ ಆರಂಭಿಸುತ್ತೆನೆ. ಪಕ್ಷದಲ್ಲಿ ನನಗೆ ಯಾವರೀತಿ ಗೌರವ ಕೊಡಬೇಕೋ ಅದನ್ನು ಕೊಟ್ಟಿದಾರೆ, ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರೆ.
Comments