ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡರ ಮುಡಿಗೆ ಮತ್ತೊಂದು ಗರಿ

ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಶ್ರಮಿಸಿದವರಿಗೆ ನೀಡಲಾಗುವ ಪ್ರತಿಷ್ಠಿತ ವಾಲ್ಮಿಕಿ ಪ್ರಶಸ್ತಿಯನ್ನು ರಾಜ್ಯ ಸರ್ಕಾರವು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರಿಗೆ ನೀಡಲು ನಿರ್ಧಾರ ಮಾಡಿದೆ. ಇದೀಗ ವಾಲ್ಮೀಕಿ ಪ್ರಶಸ್ತಿಗೆ ಹೆಚ್.ಡಿ. ದೇವೇಗೌಡರು ಭಾಜನರಾಗಿದ್ದಾರೆ.
ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರ ನೇಮಿಸಿದ್ದ ವಾಲ್ಮಿಕಿ ಪ್ರಶಸ್ತಿ ಆಯ್ಕೆ ಸಮಿತಿ ಶಿಫಾರಿಸಿನಂತೆ ರಾಜ್ಯ ಸರ್ಕಾರ ಈ ಪ್ರಶಸ್ತಿಯನ್ನು ಹೆಚ್.ಡಿ.ದೇವೇಗೌಡರಿಗೆ ನೀಡಿ ಗೌರವಿಸಲು ಮುಂದಾಗಿದೆ. ವಿಧಾನಸೌಧದ ಸಭಾಂಗಣದಲ್ಲಿ ಬುಧವಾರ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.ಮಗನಿಂದಲೇ ತಂದೆಯವರಿಗೆ ಪ್ರಶಸ್ತಿ ಪ್ರಧಾನ ಅಂದರೆ ಎಷ್ಟು ಖುಷಿಯ ವಿಚಾರ ಅಲ್ವ.
Comments