ಮುಖ್ಯಮಂತ್ರಿ ಆಗಿದ್ದರ ಹಿಂದಿನ ರಹಸ್ಯ ಬಿಚ್ಚಿಟ್ಟ CM HDK
ವಿಧಾನ ಸಭಾ ಚುನಾವಣೆ ಮುಗಿದು ಫಲಿತಾಂಶ ಬಂದ ಮೇಲೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರು.. ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಾವು ಸಿಎಂ ಸ್ಥಾನಕ್ಕೆ ಬರಲು ಯಾರು ಕಾರಣ ಏನು ಎಂಬುದರ ರಹಸ್ಯ ಬಿಚ್ಚಿಟ್ಟಿದ್ದಾರೆ.
ತಲಕಾವೇರಿಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತೇವೆಂಬ ಮೂಢ ನಂಬಿಕೆಯಿಂದ ಇದುವರೆಗೂ ರಾಜ್ಯದ ಯಾವ ಮುಖ್ಯಮಂತ್ರಿಗಳು ಕೂಡ ಇಲ್ಲಿಗೆ ಭೇಟಿ ನೀಡಿರಲಿಲ್ಲ. ಆದರೆ ಬುಧವಾರದಂದು ತೀರ್ಥೋದ್ಭವದಲ್ಲಿ ಪಾಲ್ಗೊಂಡಿದ್ದ ಕುಮಾರಸ್ವಾಮಿಯವರು, ಈ ಹಿಂದೆಯೇ ತಲಕಾವೇರಿಗೆ ಬಂದು ಹೋಗಿದ್ದರಿಂದಲೇ ಇಂದು ಮುಖ್ಯಮಂತ್ರಿಯಾಗಿದ್ದೇನೆ ಎಂಬ ರಹಸ್ಯವನ್ನು ತಿಳಿಸಿದ್ದಾರೆ.
Comments