ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿಯನ್ನು ಬೆಂಬಲಿಸಿದ ಕಾಂಗ್ರೆಸ್ ಮುಖಂಡರು ಹೇಳಿದ್ದು ಏನು.?

ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ಈ ಬಾರಿಯ ಉಪ ಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರನ್ನು ಬೆಂಬಲಿಸುತ್ತಿದ್ದೇವೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಗಂಗಾಧರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೈತ್ರಿ ಸರಕಾರವು ರಾಜ್ಯದಲ್ಲಿ ಕೋಮುವಾದಿ ಪಕ್ಷವನ್ನ ಅಧಿಕಾರದಿಂದ ದೂರ ಇಡುವ ಕಾರಣ ಉಪಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದು ರಾಮನಗರದಿಂದ ಅನಿತಾ ಕುಮಾರಸ್ವಾಮಿ ಯವರನು ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲಾಗಿದ್ದು, ಈ ಬರಿ ಅನಿತಾ ಕುಮಾರಸ್ವಾಮಿ ಯವರನ್ನು ಬೆಂಬಲಿಸಲಿದ್ದೇವೆ. ಇದನ್ನು ಕಾರ್ಯಕರ್ತರಿಗೆ ಕೂಡ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು. ನಾಮಪತ್ರ ಸಲಿಕೆ ವೇಳೆಯಲ್ಲಿ ಜಿಲ್ಲಾ ನಾಯಕರಿಗೆ ಆಹ್ವಾನ ವಿರಲಿಲ್ಲ, ಒಂದು ವೇಳೆ ಆಹ್ವಾನ ಬಂದಿದ್ದಾರೆ ನಾವೆಲ್ಲರೂ ಖಂಡಿತ ಹೋಗುತಿದ್ದೆವು ಎಂದು ಹೇಳಿದರು.
ಸಿ ಎಂ ಲಿಂಗಪ್ಪ ನವರು ಅನಿವಾರ್ಯ ಕಾರಣದಿಂದ ಈ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಅವರು ಈಗಲೂ ನಮ್ಮ ಜೊತೆ ಇದ್ದಾರೆ ಎಂಬ ಸ್ವಷ್ಟನೆ ನೀಡಿದರೆ.
Comments