ಕಾಂಗ್ರೆಸ್ ಸಚಿವರ ಲಾಬಿಗೆ ಸಿಎಂ ಬಿಗ್ ಬ್ರೇಕ್..!
ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ನಂತರ ಕೆಲವೊಂದು ಕಡೆ ಸಾಕಷ್ಟು ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸಚಿವರು ಸಾಕಷ್ಟು ಲಾಬಿ ನಡೆಸಿದರು, ಆದರೆ ಇದೀಗ ಲಾಬಿಗೆ ಬ್ರೇಕ್ ಬಿದ್ದಿದ್ದು, ಸರ್ಕಾರದಿಂದ ಈ ನಿಟ್ಟಿನಲ್ಲಿ ಹೊಸ ಸುತ್ತೊಲೆ ಹೊರಡಿಸಲಾಗಿದೆ. ಸಿಎಂ ಗಮನಕ್ಕೆ ಬಂದು ವರ್ಗಾವಣೆ ಆದ ಅಧಿಕಾರಿಗಳಿಗೆ ಮರುಸ್ಥಳ ಕೊಡುವುದಿಲ್ಲ ಎಂದು ಸಿಎಸ್ ಸುತ್ತೋಲೆ ಹೊರಡಿಸಿದ್ದಾರೆ.
ಮುಖ್ಯಮಂತ್ರಿಗಳ ಅನುಮೋದನೆ ಹೋಗಿ ಆಗಿರುವ ವರ್ಗಾವಣೆಗೆ ಯಾವುದೇ ರೀತಿಯ ಮರುಸ್ಥಳ ನೀಡುವುದಿಲ್ಲ ಎಂದು ಸುತ್ತೊಲೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಅಧಿಕಾರಿಗಳು ವರ್ಗಾವಣೆ ಮಾಡಿದ ಸ್ಥಳಕ್ಕೆ ಸರಿಯಾದ ಸಮಯಕ್ಕೆ ರಿಪೋರ್ಟ್ ಮಾಡಿಕೊಳ್ಳಲು ಸೂಚನೆಯನ್ನು ನೀಡಲಾಗಿದೆ. ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್ ಆದೇಶ ನೀಡಿದ್ದು, ವರ್ಗಾವಣೆ ಮಾಡಿದ ಮೇಲೆ ರಿಪೋರ್ಟ್ ಮಾಡಿಕೊಳ್ಳಲು ಅಧಿಕಾರಿಗಳು ವಿಳಂಭ ಧೋರಣೆ ಅನುಸರಿಸುತ್ತಿದ್ದಾರೆಂದು ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.
Comments