ಹಿಂಗೈತೆ ನೋಡು ಗುರೂ ವಿಲನ್ನೂ... ತಾಯಿ ಮಗನ ಹುಡುಕಾಟದಲ್ಲಿ...ಹಬ್ಬದೂಟ-ಬಾಡೂಟ ಎರಡೂ ಒಟ್ಟಿಗೆ ಕೊಟ್ಟ ಪ್ರೇಮ್
ಬಹುನಿರೀಕ್ಷೆಯ ಸಿನಿಮಾ ದಿ ವಿಲನ್ ಇಂದು ದೊಡ್ಡಬಳ್ಳಾಪುರದ ಎರಡು ಪ್ರಮುಖ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಎಲ್ಲಾ ಮಾಸ್ ಅಂಶಗಳನ್ನು ತುಂಬಿಕೊಂಡಿರೋ ದಿ ವಿಲನ್ ನಲ್ಲಿ ರಾಮ-ರಾವಣರ ಯುದ್ಧ ನೋಡೋದೇ ಚಂದ, ಶಿವಣ್ಣ ಮತ್ತು ಸುದೀಪ್ ಜೊತೆಯಲ್ಲಿ ಮತ್ತೊಬ್ಬ ಹೀರೋ ಚಿತ್ರದಲ್ಲಿದ್ದಾನೆ......ಅರ್ಜುನ್ ಜನ್ಯ ಮೊದಲಿನಿಂದ ಕೊನೆಯವರೆಗೂ ಹಾಡುಗಳಲ್ಲಿ, ಬ್ಯಾಕ್ ಗ್ರೌಂಡ್ ಮ್ಯೂಸಿಕ್, ರಿ-ರೆಕಾರ್ಡಿಂಗ್ ನಲ್ಲಿ ತಮ್ಮ ಕೆಲಸ ಅಚ್ಚುಕಟ್ಟಾಗಿ ಮಾಡಿದ್ದಾರೆ. ಶಿವಣ್ಣ ಮತ್ತು ಸುದೀಪ್ ಎಂಟ್ರಿ ಸೀನ್ ಅದ್ಭುತ... ಇಬ್ಬರು ಹೀರೋಗಳನ್ನು ಇಟ್ಟು ಚಿತ್ರ ಮಾಡೋದು ಸುಲಭವಲ್ಲ, ನಿರ್ದೇಶಕ ಪ್ರೇಮ್ ತಮ್ಮ ಕೆಲಸದಲ್ಲಿ, ಚಿತ್ರದ ಬಗ್ಗೆ ತಮಗಿರೋ ಫ್ಯಾಷನ್ ಎಷ್ಟಿದೆ ಅನ್ನೋದನ್ನು ತೋರಿಸಿದ್ದಾರೆ.
ಚಿತ್ರದಲ್ಲಿ ಮೂವರು ಫೈಟ್ ಮಾಸ್ಟರ್ ಗಳು ಕೆಲಸಮಾಡಿದ್ದಾರೆ, ಮೂವರೂ ಒಬ್ಬರಿಗಿಂತ ಒಬ್ಬರು ಪೈಪೋಟಿಯಿಂದ ಸ್ಟಂಟ್ ದೃಶ್ಯಗಳನ್ನು ಕಂಪೋಸ್ ಮಾಡಿದ್ದಾರೆ, ಚಿತ್ರ ಪ್ರಾರಂಭದಿಂದಲೇ ಹಾಡು, ಅದ್ದೂರಿ ಸಾಹಸ, ಛೇಸಿಂಗ್, ದೃಶ್ಯಗಳು, ಮನಸೂರೆಗೊಳ್ಳೋ ಗ್ರಾಫಿಕ್ಸ್ ನೊಂದಿಗೆ ರಾವಣ, ಕೈಜಾರಾಮರ ಜುಗಲ್ಬಂದಿ ಸಾಗುತ್ತದೆ. ವಿದೇಶಗಳಲ್ಲಿನ ದೃಶ್ಯಗಳ ಚಿತ್ರೀಕರಣ ಕಣ್ಣಿಗೆ ಹಬ್ಬ, ಶಿವಣ್ಣನ ಡಾನ್ಸ್, ಫೈಟ್, ಛೇಸಿಂಗ್, ಜಂಪಿಂಗ್ ಸೂಪರ್, ಚಿತ್ರ ಶುರುವಾಗಿ ಅರ್ಧ ಘಂಟೆಯಾದಮೇಲೆ ಬರೋ ಸುದೀಪ ತಮ್ಮ ನಡೆ, ಮಾತು, ಫೈಟ್ ಮತ್ತು ಅಭಿನಯದೊಂದಿಗೆ ಚಿತ್ರ ಮುಗಿಯುವ ಹೊತ್ತಿಗೆ ಪೂರ್ತಿ ಆವರಿಸಿಕೊಂಡು ಬಿಡುತ್ತಾರೆ. ಇಲ್ಲಿ ರಾಮ ಯಾರು? ರಾವಣ ಯಾರು? ಅನ್ನೋದು ಮುಖ್ಯ ಅಲ್ಲ, ಚಿತ್ರವನ್ನು ಚಿತ್ರವಾಗಿ ನೋಡಿ ಖಂಡಿತಾ ಮಜಾ ಸಿಗುತ್ತೆ, ನಾಯಕಿ ಆಮಿ ಜಾಕ್ಸನ್ ಬಿಟ್ಟು ಉಳಿದ ಎಲ್ಲರೂ ತಮ್ಮ ಕೆಲಸ ಶ್ರದ್ಧೆಯಿಂದ ಮಾಡಿದ್ದಾರೆ,
ಹಾಗೇ ನೋಡಿದರೆ ಚಿತ್ರದಲ್ಲಿ ಮೈನೆಸ್ ಗಿಂತ ಪ್ಲಸ್ ಪಾಯಿಂಟ್ ಗಳೇ ಜಾಸ್ತಿ ಇದೆ, ಇರಲಿ ಬಿಡಿ.....ಚಿತ್ರದ ನಿಜವಾದ ಹೀರೋ.....ನಿರ್ಮಾಪಕ ಮನೋಹರ್, ಅವರಿಗೊಂದು ಧನ್ಯವಾದ ಹೇಳಿಬಿಡೋಣ.....ಥ್ಯಾಂಕ್ ಯೂ...ಮನೋಹರ್,
Comments