ಕಾಂಗ್ರೆಸ್’ಗೆ ಬಿಗ್ ಶಾಕ್: 'ಕೈ' ಪಕ್ಷವನ್ನು ಬೆಚ್ಚಿ ಬೀಳಿಸುವಂತಿದೆ ಸಿಎಂ ಎಚ್’ಡಿಕೆಯ ಈ ನಿರ್ಧಾರ..!?
ಈಗಾಗಲೇ ದೋಸ್ತಿ ಪಕ್ಷಗಳ ನಡುವೆ ನಡೆಯುತ್ತಿದ್ದ ಅಧಿಕಾರಿಗಳ ವರ್ಗಾವಣೆ ತಿಕ್ಕಾಟ ಈಗ ಮತ್ತಷ್ಟುತೀವ್ರಗೊಳ್ಳುವಂತಹ ನಿರ್ಧಾರವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೈಗೊಂಡಿದ್ದಾರೆ.
ಒಂದು ಸಲ ಅಧಿಕಾರಿಯೊಬ್ಬರನ್ನು ಮುಖ್ಯಮಂತ್ರಿ ವರ್ಗಾವಣೆ ಮಾಡಿದರೆ ಆ ಅಧಿಕಾರಿ ಮಾತೃ ಇಲಾಖೆಯ ಮರುಸ್ಥಳಕ್ಕೆ ಯಾವುದೆ ಆದೇಶದ ಹಂಗಿಲ್ಲದೇ ವರ್ಗಾವಣೆಯಾದ ಹುದ್ದೆಯನ್ನು ವಹಿಸಿಕೊಳ್ಳಬಹುದಾಗಿದೆ. ಮುಖ್ಯಮಂತ್ರಿಯವರಿಗೆ ಇಂತಹದ್ದೊಂದು ಪರಮಾಧಿಕಾರವನ್ನು ನೀಡುವ ಸುತ್ತೋಲೆಯನ್ನು ಮಂಗಳವಾರ ರಾಜ್ಯ ಸರ್ಕಾರವು ಹೊರಡಿಸಿದೆ. ಮುಖ್ಯಮಂತ್ರಿಯವರು ಇನ್ನು ಮುಂದೆ ಯಾರನ್ನೇ ವರ್ಗಾವಣೆ ಮಾಡಿ ಆದೇಶಿಸಿದರೂ ಅಂತಹ ಅಧಿಕಾರಿ ನೇರವಾಗಿ ವರ್ಕ್ ರಿಪೋರ್ಟ್ ಮಾಡಿಕೊಳ್ಳಬಹುದು. ಇದಕ್ಕೆ ಮಾತೃ ಇಲಾಖೆಯಿಂದ ಮರುಸ್ಥಳ ನಿಯುಕ್ತಿ ಆದೇಶ ಪಡೆಯುವ ಅಗತ್ಯವಿಲ್ಲ ಎಂದು ಸುತ್ತೋಲೆ ಹೊರಡಿಸಲಾಗಿದೆ. ಇದರಿಂದ ಕಾಂಗ್ರೆಸ್ ಪಕ್ಷದವರು ಕೆಂಡಾಮಂಡಲ ಆಗಿದ್ದಾರೆ.
Comments