ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಗೆ JDS ಪಕ್ಷದಿಂದಲೇ ಸಿಕ್ಕಿದೆ ಭರ್ಜರಿ ಗಿಫ್ಟ್..!
ಜೆಡಿಎಸ್ ರಾಜ್ಯಾಧ್ಯಕ್ಷರಾದ ಹುಣಸೂರು ಶಾಸಕ ಎ.ಹೆಚ್. ವಿಶ್ವನಾಥ್ ಅವರಿಗೆ ಪಕ್ಷದಿಂದ ಭರ್ಜರಿ ಗಿಪ್ಟ್ ಸಿಕ್ಕಿದೆ. ಈಗಾಗಲೇ ರಾಜ್ಯಾಧ್ಯಕ್ಷರಿಗೆ ಹೊಸ ಕಾರು ನೀಡುವ ಬಗ್ಗೆ ಪ್ರಸ್ತಾವನೆಯನ್ನು ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡರ ಮುಂದೆ ಇಟ್ಟಿದ್ದರು.
ಇದೀಗ ಜೆಡಿಎಸ್ ಪಕ್ಷವು ಹೊಸ ಇನ್ನೋವಾ ಕ್ರಿಸ್ಟಾ ಕಾರನ್ನು ಉಡುಗೊರೆಯಾಗಿ ನೀಡಿದೆ. ಪಕ್ಷದ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಬೇಕಾದ ರಾಜ್ಯಾಧ್ಯಕ್ಷರಿಗೆ ಹೊಸ ಕಾರು ನೀಡುವ ಪ್ರಸ್ತಾವವನ್ನು ಮಾಜಿ ಪ್ರಧಾನಿ ದೇವೆಗೌಡರು ಅಂಗೀಕರಿಸಿದ್ದಾರೆ. ಅಂತಿಮವಾಗಿ ಇಂದು ವಿಶ್ವನಾಥ್ ಅವರಿಗೆ ಹೊಸ ಕಾರು ನೀಡಲಾಗಿದೆ. ಕಳೆದ ತಿಂಗಳು ಹಾಸನ ಹೊರ ವಲಯದ ರೆಸಾರ್ಟ್ ವೊಂದರಲ್ಲಿ ನಡೆದಿದ್ದ ಜೆಡಿಎಸ್ ನ ಅನೌಪಚಾರಿಕ ಶಾಸಕಾಂಗ ಸಭೆಯಲ್ಲಿ ಕಾರು ಖರೀದಿಸುವ ಪ್ರಸ್ತಾಪವನ್ನು ದೇವೇಗೌಡರು ಪಕ್ಷದ ಶಾಸಕರೆದರು ಇಟ್ಟಿದ್ದರು ಎಂದು ಹೇಳಲಾಗುತ್ತಿದೆ. ದಸರ ಹಬ್ಬಕ್ಕೆ ಗಿಫ್ಟ್ ಎಂಬಂತೆ ಹುಣಸೂರು ಶಾಸಕ ಎ.ಹೆಚ್. ವಿಶ್ವನಾಥ್ ಕಾರ್ ಸಿಕ್ಕಿರುವುದು ಖುಷಿಯಾಗಿದೆ.
Comments