‘ಅಧಿಕಾರ ದಾಹ ಇಲ್ಲ’ ಎಂಬುದನ್ನು ಸಾಬೀತು ಮಾಡಿದ ಸಿಎಂ ಕುಮಾರಸ್ವಾಮಿ

ಸಮ್ಮಿಶ್ರ ಸರ್ಕಾರ ರಚನೆಯಾಗಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುವ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಕೆಳಗಿಳಿಸಲು ವಿರುದ್ದ ಪಕ್ಷಗಳು ಸಾಕಷ್ಟು ಪ್ರಯತ್ನ ಮಾಡುತ್ತಿವೆ. ಆದರೂ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇದ್ಯಾವುದಕ್ಕೂ ತಲೆ ಕೆಡೆಸಿಕೊಳ್ಳದೆ ರಾಜ್ಯದ ಉದ್ದಾರಕ್ಕಾಗಿ ಶ್ರಮಿಸುತ್ತಿದ್ದಾರೆ. ಇದೀಗ ಸಿಎಂ ಕುಮಾರಸ್ವಾಮಿ ಈಗ ಮೂಢನಂಬಿಕೆಯೊಂದನ್ನು ವಿರೋಧಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ತಲಾಕಾವೇರಿಯ ತೀರ್ಥೋದ್ಭವದಲ್ಲಿ ಭಾಗಿಯಾದರೆ ಸಿಎಂ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಇದೆ. ಹಾಗಾಗಿ ಇದನ್ನು ನಂಬಿದ ಯಾವ ಮುಖ್ಯಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಆದರೆ ಈ ಬಾರಿ ಕುಮಾರಸ್ವಾಮಿ ಈ ಮೂಢನಂಬಿಕೆಯ ವಿರುದ್ಧ ಹೋಗಲಿದ್ದಾರೆ. ಅಕ್ಟೋಬರ್ 17ರಂದು ತಲಕಾವೇರಿಯ ತೀರ್ಥೋದ್ಬವಕ್ಕೆ ಸಿಎಂ ಕುಮಾರಸ್ವಾಮಿ ಭೇಟಿ ಮಾಡಿ ಪೂಜೆ ಸಲ್ಲಿಸಲಿದ್ದಾರಂತೆ.ಈ ಮೂಲಕ ತಾನು ಅಧಿಕಾರಕ್ಕೆ ಅಂಟಿ ಕುಳಿತಿಲ್ಲ ಹಾಗೂ ಮೂಢನಂಬಿಕೆಯನ್ನು ನಂಬುವುದಿಲ್ಲ ಎಂಬುದನ್ನು ಸಿಎಂ ಈ ಮೂಲಕ ಎಲ್ಲರಿಗೂ ಅರ್ಥಮಾಡಿಸಿದ್ದಾರೆ.
Comments