ಬಿಗ್ ಬ್ರೇಕಿಂಗ್ : ದೋಸ್ತಿ ಸರ್ಕಾರ ಉರುಳಿಸಲು ಬಿಜೆಪಿ ತಂತ್ರದ ಬಗ್ಗೆ ಸಿಎಂ HDK ಬಿಚ್ಚಿಟ್ರು ಸ್ಪೋಟಕ ಮಾಹಿತಿ..!
ದೋಸ್ತಿ ಸರ್ಕಾರವನ್ನು ಉರುಳಿಸಲು ಬಿಜೆಪಿಯು ಶತ ಪ್ರಯತ್ನ ಪಡುತ್ತಿದೆ ಎಂಬುದು ಈಗಾಗಲೇ ಕೇಳಿ ಬರುತ್ತಿದೆ. ಸರ್ಕಾರವನ್ನು ಬೀಳಿಸುವುದಕ್ಕೆ ಬಿಜೆಪಿ ನಾಲ್ಕು ತಿಂಗಳಿಂದ ಯತ್ನಿಸುತ್ತಿದೆ. ಅದಕ್ಕೆ ಅನೈತಿಕ ಹಣ ಸಂಗ್ರಹಿಸುತ್ತಿದೆ ಅಂತ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಶಿವಮೊಗ್ಗ ನಗರದಲ್ಲಿ ಬೃಹತ್ ಮೆರವಣಿಗೆ ನಂತರ ಸಮಾವೇಷದಲ್ಲಿ ಮಾತನಾಡಿದ ಕುಮಾರಸ್ವಾಮಿಯವರು ಸಮ್ಮಿಶ್ರ ಸರ್ಕಾರಕ್ಕೆ ಹಾನಿಯಾದರೆ ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ನಷ್ಟವಿಲ್ಲ. ಬದಲಿಗೆ ರಾಜ್ಯದ ಆರು ಕೋಟಿ ಜನರಿಗೇ ನಷ್ಟವಾಗಲಿದೆ ಎಂದು ತಿಳಿಸಿದ್ದಾರೆ. ಇನ್ನು ಕೇಂದ್ರ ಸರ್ಕಾರ ಸಾಲ ಮನ್ನಾಕ್ಕೆ ಅಸಹಕಾರ ತೋರುತ್ತಿದೆ. ಸಾಲಮನ್ನಕ್ಕಾಗಿ ಇರುವ ಅಡ್ಡಿಗಳನ್ನು ಬಗೆಹರಿಸಲು ಬಿಜೆಪಿ ನಾಯಕರು ಒಂದು ದಿನವೂ ದೆಹಲಿಗೆ ಹೋಗಿಲ್ಲ ಅಂತ ಬಿಜೆಪಿ ಪಕ್ಷದ ಮೇಲೆ ಕಿಡಿಕಾರಿದರು.
Comments