ನಿಖಿಲ್ ಕುಮಾರಸ್ವಾಮಿ ಹಾದಿಯನ್ನು ಮತ್ತಷ್ಟು ಸುಲಭ ಮಾಡಿದ CM HDK ಮಾಸ್ಟರ್ ಪ್ಲಾನ್..!

ಜೆಡಿಎಸ್ ನಿಂದ ಉಪಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಅಷ್ಟೆ ಅಲ್ಲ.. ಕುಟುಂಬ ರಾಜಕಾರಣ ಮಾಡುತ್ತಾರೆ ಎನ್ನುತ್ತಿದ್ದರು. ಆದರೆ ಈಗ ಕುಮಾರಸ್ವಾಮಿಯವರು ಅದಕ್ಕೆ ಪುಲ್ ಸ್ಟಾಪ್ ಇಟ್ಟಿದ್ದಾರೆ. ಅದಕ್ಕಾಗಿಯೇ ಮಾಸ್ಟರ್ ಫ್ಲಾನ್ ಮಾಡಿದ್ದಾರೆ..
ಜೆಡಿಎಸ್ ಗೂ ಪುತ್ರ ವ್ಯಾಮೋಹಕ್ಕೂ ಎಲ್ಲಿಲ್ಲದ ನಂಟು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪುತ್ರ ವ್ಯಾಮೋಹವಂತೂ ಎಲ್ಲರಿಗೂ ಗೊತ್ತಿದೆ.. ಎಂದು ಹೇಳುತ್ತಿದ್ದವರಿಗೆ ಕುಮಾರಣ್ಣ ಸರಿಯಾಗಿಯೇ ಉತ್ತರ ನೀಡಿದ್ದಾರೆ.. ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಶಿವರಾಮೆಗೌಡರಿಗೆ ಟಿಕೆಟ್ ಸಿಕ್ಕಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು 2019ರ ಲೋಕಸಭಾ ಚುನಾವಣೆಯಿಂದ ರಾಜಕೀಯಕ್ಕೆ ಎಂಟ್ರಿ ಕೊಡಿಸಲಿ ಈಗಿನಿಂದಲೇ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಭಾರಿ ಶಿವರಾಮೆಗೌಡರಿಗೆ ಟಿಕೇಟ್ ಕೊಟ್ಟು ಮುಂದಿನ ಬಾರಿ ನಿಖಿಲ್ ಗೆ ಸಿಗುವಂತೆ ದಾರಿಯನ್ನು ಸುಗಮ ಮಾಡಿದ್ದಾರೆ.
Comments