ಚುನಾವಣಾ ಅಖಾಡಕ್ಕೆ ದೇವೇಗೌಡರ ಎಂಟ್ರಿ..!? ಯಾವ ಕ್ಷೇತ್ರ ಗೊತ್ತಾ..?
ಈಗಾಗಲೇ ರಾಜಕೀಯದಲ್ಲಿ ಸಾಕಷ್ಟು ಯಶಸ್ಸನ್ನು ಕಂಡಿರುವ ದೇವೆಗೌಡರು ಅದೃಷ್ಟದ ಬಲದ ಮೇಲೆ ಮಗನನ್ನು ಮುಖ್ಯಮಂತ್ರಿ ಸೀಟಿನಲ್ಲಿ ಕೂರಿಸಿದ್ದಾರೆ. ದೇವೇಗೌಡರು 2019 ರಲ್ಲಿ 89 ನೇ ವಯಸ್ಸಿನಲ್ಲಿ ದಿಲ್ಲಿಯಲ್ಲಿ ಅದೃಷ್ಟ ಪರೀಕ್ಷೆ ಮಾಡುವ ಮೂಡ್‌ನಲ್ಲಿ ಇದ್ದಾರೆ. ಸರ್ಕಾರ ಬಂದ ಮೇಲೆ ದೇವೆಗೌಡರು ಮತ್ತೆ ಸ್ಪರ್ಧಿಸುವ ಬಗ್ಗೆ ಖಚಿತಪಡಿಸಿದ್ದಾರೆ.
ಹಾಸನಕ್ಕೆ ಮೊದಲ ಆದ್ಯತೆ ಆದರೂ ಮೊಮ್ಮಗ ಪ್ರಜ್ವಲ್‌ನಿಗೆ ಹಾಸನ ಕ್ಷೇತ್ರ ಬಿಟ್ಟುಕೊಟ್ಟು ಮಂಡ್ಯಕ್ಕೂ ಶಿಫ್ಟ್ ಆಗಬಹುದು.. 2019 ರಲ್ಲಿ ದೇವೇಗೌಡರ ಅದೃಷ್ಟ ತುಂಬಾ ಚೆನ್ನಾಗಿದೆ ಎಂದು ದೇವೇಗೌಡರ ಕುಟುಂಬದ ಸದಸ್ಯರು ದಿಲ್ಲಿಯಲ್ಲಿ ಖುಷಿಯಿಂದ ಹೇಳಿಕೊಳ್ಳುತ್ತಿದ್ದಾರೆ. ಈಗ ಸದ್ಯಕ್ಕೆ ಒಂದೋ ಎರಡೋ ಸೀಟು ಗೆಲ್ಲುತ್ತಿರುವ ದೇವೇಗೌಡರ ಗುರಿ ಇರುವುದು ೫ಕ್ಕಿಂತ ಹೆಚ್ಚು ಲೋಕಸಭಾ ಸ್ಥಾನ ಗೆಲ್ಲುವ ಬಗ್ಗೆ. ದೇವೆಗೌಡರು ಸ್ಪರ್ಧೆ ಮಾಡಿದರೆ ಗೆಲ್ಲುವುದು ಖಚಿತ..
Comments