ಮುಖ್ಯಮಂತ್ರಿ ಕುಮಾರಸ್ವಾಮಿಯವರಿಂದ ಪತ್ರಕರ್ತರಿಗೆ ಗುಡ್’ನ್ಯೂಸ್

ರಾಜ್ಯ ಸರ್ಕಾರದಿಂದ ಪತ್ರಕರ್ತರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಪತ್ರಕರ್ತರಿಗೆ ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತರಲಿದ್ದೇವೆ ಎಂದು ಮುಖ್ಯಮಂತ್ರಿ ಎಚ್’ಡಿ ಕುಮಾರಸ್ವಾಮಿ ಹೇಳಿದ್ದಾರೆ. ನೋಂದಾಯಿತ ಮಾತ್ರವಲ್ಲ...ನೋಂದಾಯಿತರಲ್ಲದ ಎಲ್ಲ ರೀತಿಯ ಪತ್ರಕರ್ತರಿಗೆ ಸೂರು ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.
ಇದು ಪತ್ರಕರ್ತರು, ಪತ್ರಿಕಾ ಛಾಯಚಿತ್ರಗ್ರಾಹಕರು, ಕ್ಯಾಮೆರಾಮೆನ್’ಗಳಿಗೆ ಅನ್ವಯವಾಗಲಿದೆ. ಪತ್ರಕರ್ತರ ವಿವಿಧ ಬೇಡಿಕೆಗಳಾದ ಎಲ್ಲರಿಗೆ ಬಸ್‌ಪಾಸ್, ಸಾಮಾಜಿಕ ಭದ್ರತಾ ಯೋಜನೆ, ಅಧ್ಯಯನ ಪ್ರವಾಸಕ್ಕೆ ಅನುದಾನ ಒದಗಿಸಲು ಚಿಂತನೆ ನಡೆಸಲಾಗುವುದು. ಬಜೆಟ್‌ನಲ್ಲಿ ಇದಕ್ಕೆ ಆನುದಾನ ಕಾದಿರಿಸಲು ಚರ್ಚೆಯನ್ನು ನಡೆಸಲಾಗುವುದು. ಈ ಯೋಜನೆಗಳನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
Comments