ಸಿಎಂ ಕುಮಾರಸ್ವಾಮಿಯವರ ಬಗ್ಗೆ ಅಚ್ಚರಿಯ ಭವಿಷ್ಯ ನುಡಿದ ನಾಯಕ..! ಹೆಚ್’ಡಿಕೆ ರಾಷ್ಟ್ರಪತಿಯಾಗುವ ಸುಳಿವು ಸಿಕ್ತಾ..?

ಸಿಎಂ ಹೆಚ್.ಡಿ. ಕೆ ಅವರು ಮುಂದೊಂದು ದಿನ ನಮ್ಮ ದೇಶದ ರಾಷ್ಟ್ರಪತಿ ಆಗುತ್ತಾರೆ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಭವಿಷ್ಯವನ್ನು ಹೇಳಿದ್ದಾರೆ ಎನ್ನಲಾಗಿದೆ. ದಸರಾ ಕಾರ್ಯಕ್ರಮದ ಸಮಯದಲ್ಲಿ ಮಾತನಾಡಿದ ಜನಾರ್ಧನ ಪೂಜಾರಿಯವರು, ಎಂದಿಗೂ ಸಿಗದಂತಹ ತೃಪ್ತಿ ಇಂದು ನನಗೆ ಸಿಕ್ಕಿದೆ. ದೇವೇಗೌಡರು ದೇಶದ ಪ್ರಧಾನಿಯಾಗಿದ್ದರು.
ದೇವೇಗೌಡರನ್ನು ಎಲ್ಲಿ ನೋಡಿದರೂ ಗುರುಗಳೇ ಎಂದು ಕರೆಯುತ್ತಾರೆ. ಆದರೆ, ಎಲ್ಲರಿಗೂ ಪ್ರಧಾನಿ ಆಗಲು ಸಾಧ್ಯವಿರುವುದಿಲ್ಲ. ಪೂರ್ವಜರ ಪುಣ್ಯದಿಂದ ಮಾತ್ರ ಅದು ಸಾಧ್ಯ ಎಂದಿದ್ದಾರೆ. ದೇವೇಗೌಡರ ಮಗ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಸಿಎಂ ಕುಮಾರಸ್ವಾಮಿಯವರು ಸಹನೆ, ವಿನಯವನ್ನು ಹೊಂದಿದ್ದಾರೆ. ದೇಶದ ಚರಿತ್ರೆಯಲ್ಲಿ ದೇವೇಗೌಡರ ಪಾತ್ರ ಬಹಳ ಮಹತ್ವಪೂರ್ಣವುಳ್ಳದ್ದು. ಸಿಎಂ ಕುಮಾರಸ್ವಾಮಿ ಮುಂದೊಂದು ದಿನ ರಾಷ್ಟ್ರಪತಿಯಾಗೋದು ಖಂಡಿತ ಎಂದು ಭವಿಷ್ಯವನ್ನು ನುಡಿದಿದ್ದಾರೆ.
Comments