ಸಮ್ಮಿಶ್ರ ಸರ್ಕಾರ ಪತನವಾಗುತ್ತೆ ಅಂದುಕೊಂಡವರಿಗೆ ಬಿಗ್ ಶಾಕ್: ಜೆಡಿಎಸ್’ಗೆ ಮತ್ತೆ ಸಿಕ್ತು ಆನೆಬಲ..!
ಈಗಾಗಲೇ ದೊಸ್ತಿ ಸರ್ಕಾರ ಉರುಳುತ್ತೆ ಎಂದು ಅಂದುಕೊಂಡವರಿಗೆ ಬಿಗ್ ಶಾಕ್ ಆಗಿದೆ. ಕರ್ನಾಟಕದ ದೋಸ್ತಿ ಸರ್ಕಾರದಲ್ಲಿರುವ ಬಿಎಸ್ ಪಿ ಯ ಏಕಮಾತ್ರ ಸಚಿವರಾದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಪಕ್ಷದ ಸಂಘಟನೆಯ ಸಲುವಾಗಿ ರಾಜೀನಾಮೆಯನ್ನು ಕೊಟ್ಟಿದ್ದರು.. ಇದೀಗ ಅವರು ಮತ್ತೆ ಪಕ್ಷಕ್ಕೆ ಬರಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಜೆಡಿಎಸ್'ಗೆ ದಲಿತರ ಓಟು ತಪ್ಪುವ ಸಲುವಾಗಿ ಎನ್.ಮಹೇಶ್ ರಾಜೀನಾಮೆಯನ್ನು ಸ್ವೀಕರಿಸದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಿಎಸ್ ಪಿ ನಾಯಕಿ ಮಾಯಾವತಿ ಮೂಲಕ ಮಹೇಶ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೇವೇಗೌಡರು ಆಂಧ್ರ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಮೂಲಕ ಮಾಯಾವತಿ ಅವರ ಮನ ಒಲಿಸಿ ಮಹೇಶ್ ಅವರನ್ನು ಪಕ್ಷಕ್ಕೆ ವಾಪಸ್ ಮಾಡುವಂತೆ ಒತ್ತಡ ಹಾಕಿದ್ದಾರೆ.ಇದೀಗ ಮಹೇಶ್ ಅವರು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ.
Comments