ನವೋದಯ ವಿದ್ಯಾಲಯದಲ್ಲಿ 9 ನೇ ತರಗತಿಯ ವ್ಯಾಸಂಗಕ್ಕೆ ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭ
ದೊಡ್ಡಬಳ್ಳಾಪುರ ತಾಲ್ಲೂಕಿನ ಎಂಟನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪೋಷಕರ ಗಮನಕ್ಕೆ, 2019-20 ನೇ ಸಾಲಿಗೆ 9 ನೇ ತರಗತಿಯ ವ್ಯಾಸಂಗಕ್ಕೆ ನವೋದಯ ವಿದ್ಯಾಲಯದಲ್ಲಿ ಸೇರ ಬಯಸುವ ವಿದ್ಯಾರ್ಥಿಗಳಿಗಾಗಿ ದಿನಾಂಕ 15-10-2018 ರಿಂದ ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದೆ, ನವೋದಯ ವಿದ್ಯಾಲಯಕ್ಕೆ ತಮ್ಮ ಮಕ್ಕಳನ್ನು ಸೇರಿಸಲಿಚ್ಚಿಸುವ ಪೋಷಕರು ಅಕ್ಟೋಬರ್ 15 ರಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು, ಅರ್ಜಿ ಸಲ್ಲಿಕೆ ಮುಕ್ತಾಯ ದಿನಾಂಕ 30-11-2018. ಪ್ರವೇಶ ಪರೀಕ್ಷೆ ದಿನಾಂಕ 02-02-2019 ರಂದು ನಡೆಯಲಿದೆ. ಆಸಕ್ತ ಪೋಷಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದು. ಅರ್ಜಿ ಸಲ್ಲಿಕೆ ಪ್ರಾರಂಭ 15-10-2018, ಅರ್ಜಿ ಸಲ್ಲಿಕೆ ಮುಕ್ತಾಯ 30-11-2018, ಪ್ರವೇಶ ಪರೀಕ್ಷೆ 02-02-2019
ನವೋದಯ ಕೋಚಿಂಗ್ ಕ್ಲಾಸ್ ಆರಂಭ
ದಿನಾಂಕ ೧೪-೧೦-೨೦೧೮ ಭಾನುವಾರದಂದು ನಗರದ ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ವತಿಯಿಂದ ಐದನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ನಡೆಸಲ್ಪಡುವ ಕೋಚಿಂಗ್ ತರಭೇತಿ ಆರಂಭವಾಯಿತು, ಸರಳವಾಗಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಪಿ.ಸಿ.ಲಕ್ಷ್ಮೀನಾರಾಯಣ್ ವಹಿಸಿದ್ದರು. ಶಿಕ್ಷಕ ಭಾಸ್ಕರ್ ಕರ್ಯಕ್ರಮದಲ್ಲಿ ಹಾಜರಿದ್ದ ಪೋಷಕರು ಮತ್ತು ಮಕ್ಕಳಿಗೆ ನವೋದಯ ವಿದ್ಯಾಲಯ ಕುರಿತು ಮಾಹಿತಿಯನ್ನು ನೀಡಿ ಪೋಷಕರು ತಮ್ಮ ಮಕ್ಕಳನ್ನು ಮನೆಯಲ್ಲಿ ಪರೀಕ್ಷೆಗೆ ತಯಾರಿಗೊಳಿಸುವ ನಿಟ್ಟಿನಲ್ಲಿ ಸಲಹೆ, ಸೂಚನೆಗಳನ್ನು ನೀಡಿದರು. ಟ್ರಸ್ಟ್ ಖಜಾಂಚಿ ದೇರಾನ. ಟ್ರಸ್ಟೀ ಕೃಷ್ಣಮೂರ್ತಿ, ಸುಧಾಕರ್, ಮತ್ತು ಗೋಪಾಲ್ ಹಾಜರಿದ್ದರು, ಕಾರ್ಯದರ್ಶಿ ರಮೇಶ್ ಕಾರ್ಯಕ್ರಮ ನಡೆಸಿಕೊಟ್ಟರು.
Comments