ಕಾಂಗ್ರೆಸ್ ನಾಯಕರಿಗೆ ಶಾಕ್ ಕೊಟ್ಟ ಸಿ ಎಂ ಕುಮಾರಸ್ವಾಮಿ
ರಾಹುಲ್ ಗಾಂಧಿಯವರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿಗೆ ಬಂದಿದ್ದು ಸ್ವಲ್ಪ ಹೊತ್ತು ಕುಮಾರಕೃಪದ ಅಥಿತಿ ಗೃಹದಲ್ಲಿ ತಂಗಿದ್ದರು, ಈ ಸಮಯದಲ್ಲಿ ಸಿ ಎಂ ಎಚ್ ಡಿ ಕುಮಾರಸ್ವಾಮಿಯವರು ಸೌಜನ್ಯವಿತ ಭೇಟಿ ಮಾಡಿದ್ದು ಮಹತ್ವದ ಚರ್ಚೆಯನ್ನ ಮಾಡಿದ್ದಾರೆ.
ಕುಮಾರಸ್ವಾಮಿ ಹಾಡಿದ ಮಾತನ್ನು ಕೇಳಿದ ಸ್ವತಃ ರಾಹುಲ್ ಗಾಂಧಿಯವರೇ ಕ್ಷಣಕಾಲ ಮೌನವಾಗಿಬಿಟ್ಟರು, ಸಿದ್ದರಾಮಯ್ಯ, ಪರಮೇಶ್ವರ್ ಕೂಡ ಇದಕ್ಕೆ ಹೊರತಾಗಿಲ್ಲ, ಲೋಕಸಭೆ ಚುನಾವಣೆತನಕ ಯಾವುದೇ ಕಾರಣಕ್ಕೂ ಸಂಪುಟ ವಿಸ್ತರಣೆ ಬೇಡ, ಈಗ ಶಾಸಕರಿಗೆ 25 ನಿಗಮ ಮಂಡಳಿಗಳಿಗೆ ನೇಮಕ ಮಾಡೋಣ, ಈಗಾಗಲೇ ಬಹುತೇಕ ಶಾಸಕರು ಬಿಜೆಪಿ ನಾಯಕರನ್ನು ಟಚ್ ಮಾಡಿ ಬಂದಿದ್ದಾರೆ. ಬಿಜೆಪಿ ನಾಯಕರು ಆಪರೇಶನ್ ಕಮಲಕ್ಕೆ ಮುಂದಾಗಿರುವ ಕಾರಣ ಸಂಪುಟ ವಿಸ್ತರಣೆ ಲೋಕ ಸಭೆ ನಂತರ ರಾಜ್ಯ ನಾಯಕರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳೋಣ, ನಮ್ಮ ತಂದೆ ಎಚ್ ಡಿ ದೇವೇಗೌಡರು ಕೂಡ ಇದನ್ನೇ ಹೇಳಿದರೆ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದರು.
Comments