ದೇವಾಂಗ ಶ್ರೀ ಸಂಕಣ್ಣನವರ ಚಾರಿಟಬಲ್ ಟ್ರಸ್ಟ್ ವತಿಯಿಂದ ಪೂಜಾ ಕಾರ್ಯಕ್ರಮ







ದೇವಾಂಗ ಶ್ರೀ ಸಂಕಣ್ಣನವರ ಚಾರಿಟಬಲ್ ಟ್ರಸ್ಟ್ ವತಿಯಿಂದ ದಿನಾಂಕ 12-10-2018 ಶುಕ್ರವಾರದಂದು ಶ್ರೀರಾಮಲಿಂಗ ಚಂದ್ರ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ನಾಲ್ಕನೇ ವರ್ಷದ ನವರಾತ್ರಿ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು, ರಾಮಲಿಂಗ ಚಂದ್ರ ಚೌಡೇಶ್ವರಿ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು, ಮಹಿಳೆಯರು ಲಲಿತಾ ಸಹಸ್ರನಾಮ ಪಠಣೆ, ಪೂಜೆ ಮತ್ತು ಪ್ರಸಾದ ವಿನಿಯೋಗವನ್ನು ನೆರವೇರಿಸಲಾಯಿತು.
ದೇವಾಂಗ ಮಂಡಲಿ ಮಾಜಿ ಅಧ್ಯಕ್ಷ ತಿಮ್ಮಶೆಟ್ಟಪ್ಪ, ಪಿ.ಸಿ.ವಿ ಟ್ರಸ್ಟ್ ಸಂಸ್ಥಾಪಕ ವೆಂಕಟೇಶ್, ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಅಧ್ಯಕ್ಷ ಮತ್ತು ನಗರಸಭಾ ಸದಸ್ಯ ಪಿ.ಸಿ. ಲಕ್ಷ್ಮೀನಾರಾಯಣ್, ಕಾರ್ಯದರ್ಶಿ ರಮೇಶ್, ಖಜಾಂಚಿ ಮೂರ್ತಿ ಮತ್ತು ಟ್ರಸ್ಟಿ ಸುಧಾಕರ್, ಶ್ರೀ ದೇವರ ದಾಸಿಮಯ್ಯ ಮಿತ್ರ ಮಂಡಳಿ, ಶಾಂತಿನಗರ ಅಧ್ಯಕ್ಷ ರಾಮಮೂರ್ತಿ, ಮತ್ತು ಪದಾಧಿಕಾರಿಗಳು, ಕರ್ನಾಟಕ ನೇಕಾರ ರಕ್ಷಣಾ ವೇದಿಕೆಯ ಅಧ್ಯಕ್ಷ ಕೃಷ್ಣಕುಮಾರ್, ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಕೆ.ಎಸ್.ಮಂಜುನಾಥ್ ಮತ್ತು ಪದಾಧಿಕಾರಿಗಳು, ದೇವಾಂಗ ಮಂಡಲಿ ಹಂಗಾಮಿ ಅಧ್ಯಕ್ಷ ದಿನೇಶ್ ಮತ್ತು ಎಲ್ಲಾ ಪದಾಧಿಕಾರಿಗಳು, ಕುಲ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ದೇವಾಂಗ ಶ್ರೀ ಸಂಕಣ್ಣನವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಸ್.ಎನ್. ರಾಜಣ್ಣ, ಉಪಾಧ್ಯಕ್ಷ ಸದಾಶಿವಯ್ಯ, ಗೌರವಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ನಾಗರಾಜ್,ಮಹೇಶ್, ಖಜಾಂಚಿ ಶಂಕರ್, ವಿಜೇಂದ್ರ ಪ್ರಸಾದ್, ವಿಶ್ವನಾಥ್, ಮೋಹನ್, ನರೇಂದ್ರ, ಶಿವಕುಮಾರ್, ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು ...
Comments