ಅಧಿಕಾರಿಗಳ ಮುಂದೆಯೇ ಮಾವನಿಗೆ ಕ್ಲಾಸ್ ತೆಗೆದುಕೊಂಡ ಸಿಎಂ ಕುಮಾರಸ್ವಾಮಿ..! ಕಾರಣ ಏನು..?
ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೆಲಸದ ವಿಷಯ ಬಂದರೆ ಯಾವ ಸಮಬಂದಕ್ಕೂ ಬೆಲೆ ಕೊಡುವುದಿಲ್ಲ ಎಂಬ ಮಾತಿನಂತೆ ಸಂಬಂಧದಲ್ಲಿ ಮಾವನಾಗಿರುವ ತಮ್ಮ ಸಚಿವ ಸಂಪುಟದ ಸಹೋದ್ಯೋಗಿ ಡಿ.ಸಿ. ತಮ್ಮಣ್ಣನವರನ್ನು ಅಧಿಕಾರಿಗಳ ಸಭೆಯಲ್ಲಿ ಕ್ಲಾಸ್ ತೆಗೆದುಕೊಂಡಿರುವ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಸಾರಿಗೆ ಸಚಿವರಾಗಿರುವ ಡಿ.ಸಿ. ತಮ್ಮಣ್ಣ, ಸಾರಿಗೆ ಅಧಿಕಾರಿಗಳ ಸಭೆಯಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಪೊನ್ನುರಾಜ್ ಅವರ ವಿರುದ್ಧ ಮುಖ್ಯಮಂತ್ರಿಗಳ ಬಳಿ ದೂರು ಹೇಳಿದರು ಎನ್ನಲಾಗಿದೆ. ಆದರೆ ಎಲೆಕ್ಟ್ರಿಕ್ ಬಸ್ ಖರೀದಿ ವಿಚಾರದಲ್ಲಿ ತಮ್ಮಣ್ಣ ಅವರ ಮಗನ ಪಾತ್ರದ ಕುರಿತು ಈ ಮೊದಲೇ ಮಾಹಿತಿ ಪಡೆದಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಪೊನ್ನುರಾಜ್ ಅವರ ಕುರಿತು ನನಗೆ ತುಂಬಾ ವಿಶ್ವಾಸ ಇದೆ. ಅವರ ವಿರುದ್ಧ ಸುಮ್ಮನೆ ಆರೋಪ ಮಾಡಬೇಡಿ. ನಿಮ್ಮ ಕೆಲಸವನ್ನು ನೀವು ಮಾಡಿಕೊಂಡು ಹೋಗಿ ಎಂದು ತಮ್ಮಣ್ಣನವರಿಗೆ ಹೇಳಿದ್ದಾರೆ ಎನ್ನಲಾಗಿದೆ.
Comments