ವಿಜಯ್ ಪ್ರಕಾಶ್ ಹಾಡಿದ ಹಾಡಿಗೆ ಭಾವುಕರಾಗಿ ಕಣ್ಣೀರಿಟ್ಟ ಸಿಎಂ ಹೆಚ್.ಡಿ. ಕುಮಾರಸ್ವಾಮಿ..! ಅಷ್ಟಕ್ಕೂ ಆ ಹಾಡು ಯಾವುದು..?
ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮೈಸೂರು ದಸರಾ ಅಂಗವಾಗಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ್ದಾರೆ.
ಯುವ ದಸರಾ ಕಾರ್ಯಕ್ರಮದಲ್ಲಿ ಗಾಯಕ ವಿಜಯ್ ಪ್ರಕಾಶ್ ಅವರು ಒಳಿತು ಮಾಡು ಮನುಸ, ನೀ ಇರೋದು ಮೂರು ದಿವಸ ಎಂದು ಹಾಡು ಹಾಡಿದ್ದಾರೆ. ಈ ವೇಳೆ ಭಾವುಕರಾದ ಸಿಎಂ ಹೆಚ್ಡಿಕೆ, ಹಾಡನ್ನು ಮತ್ತೊಮ್ಮೆ ಹಾಡುವಂತೆ ಮನವಿಯನ್ನು ಕೂಡ ಮಾಡಿದರು. ಗಾಯಕರಾದ ವಿಜಯ್ ಪ್ರಕಾಶ್ ಹಾಗೂ ರಕ್ಷಿತ್ ಜೊತೆಯಾಗಿ ಈ ಹಾಡನ್ನು ಹಾಡಿದ್ದು, ಅದನ್ನು ಕೇಳುತ್ತಲ್ಲೇ ಸಿಎಂ ಕಣ್ಣೀರು ಹಾಕಿದ್ದಾರೆ. ಹಾಡು ಮುಗಿದ ಬಳಿಕ ಸಿಎಂ ವಿಜಯ್ ಪ್ರಕಾಶ್ ಅವರಿಗೆ ಕೈ ಮುಗಿದು ಅಭಿನಂದನೆ ಸಲ್ಲಿಸಿದ್ದಾರೆ.
Comments